Uncategorized

ಇಂದು ಹಿಡಕಲ್ ಜಲಾಶಯದಿದ 5 ಸಾವಿರ ಕ್ಯೂಸೇಕ್ ನೀರು ಬಿಡುಗಡೆ ಮಾಡಲಿರುವ ಅಧಿಕಾರಿಗಳು! 

ಬೆಳಗಾವಿ:

ಮಹಾರಾಷ್ಟ್ರದ ಪಶ್ಚಿಮಘಟ್ಟಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್(ರಾಜಾಲಖಮನಗೌಡ ಜಲಾಶಯ ಸಂಪೂರ್ಣ ‌ಭರ್ತಿಯಾಗಿದೆ. ಜಲಾಶವೂ ಶೇಖಡಾ 100℅ ಭರ್ತಿಯಾಗಿರುವುದರಿಂದ ಇಂದು ಅಂದರೆ 17/08/2026 ರಂದು ಸಂಜೆ 4 ಗಂಟೆಗೆ ಜಲಾಶಯದಿಂದ ಸುಮಾರು 5 ಸಾವಿರ ಕ್ಯೂಸೇಕ್ ನೀರು ನದಿಗೆ ಬಿಡುವುದಾಗಿ ಹಿಡಕಲ್ ಜಲಾಶಯದ ಅಧಿಕಾರಿಗಳು ಪತ್ರಿಕಾಪ್ರಟಕಣೆ ಹೊರಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಧಿಕಾರಿಗಳು ಜಲಾಶಯಕ್ಕೆ ಈಗಾಗಲೇ 8523 ಕ್ಯೂಸೇಕ್ ಒಳಹರಿವು ಇದ್ದು 5 ಸಾವಿರ ಕ್ಯೂಸೇಕ್ ನೀರನ್ನು ನದಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. 51 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗಾಗಲೇ ಶೇಖಡಾ 48 ಟಿಎಂಸಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ಜಲಾಶಯವು ಶೇಖಡಾ ನೂರರಷ್ಟು ತುಂಬಿದೆ ಹೀಗಾಗಿ ಇಂದು ಸಂಜೆ 4 ಗಂಟೆಗೆ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದ್ದು ಘಟಪ್ರಭಾ ನದಿ ತೀರ ಹಾಗೂ ಹಿರಣ್ಯಕೇಶಿ ನದಿ ತೀರದ ಜನ ಎಚ್ಚರಿಕೆಯಿಂದಿರಲು ಜಲಾಶಯದ ಅಧಿಕಾರಿಗಳು ಕೋರಿದ್ದಾರೆ. ಅಲ್ಲದೆ ನದಿ ತೀರದ ತೋಟದ ವಸತಿಗಳಲ್ಲಿ ವಾಸಿಸುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!