ಬೆಳಗಾವಿ:
ಬೆಳಗಾವಿಯಲ್ಲಿ ಬೀದಿ ನಾಯಿಯ ಡೆಡ್ಲಿ ಅಟ್ಯಾಕ್ ಗೆ ವೃದ್ದ ಗಾಯಗೊಂಡಿರುವ ಘಟನೆ ನಡೆದಿದೆ. ನಡೆದುಕೊಂಡು ತನ್ನಪಾಡಿಗೆ ತಾನು ಬರುತ್ತಿದ್ದ ವೃದ್ದನ ಮೇಲೆ ನಾಯಿ ಏಕಾಎಕಿ ಅಟ್ಯಾಕ್ ಮಾಡಿದೆ. ಬೆಳಗಾವಿಯ ಮಹಾಂತೇಶ್ ನಗರದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸರೆಯಾಗಿದೆ. ಬೀದಿ ನಾಯಿ ಅಟ್ಯಾಕ್ ಮಾಡುತ್ತಿದ್ದಂತೆ ವೃದ್ದ ನೆಲಕ್ಕೆ ಬಿದ್ದಿದ್ದಾನೆ. ವೃದ್ದ ನೆಲಕ್ಕೆ ಬಿದ್ದರೂ ಸಹ ಬಿಡದೆ ನಾಯಿ ಅಟ್ಯಾಕ್ ಮಾಡಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯರು ಮನವಿ ಮಾಡಿದ್ದರೂ ಸಹ ಅದಕ್ಕೂ ತಮಗೂ ಸಂಬಂಧವಿಲ್ಲದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ವರ್ತಿಸುತ್ತಿದ್ದು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಪದೇ ಪದೇ ಬೀದಿ ನಾಯಿಗಳ ಹಾವಳಿಯಿಂದ ಮಹಾನಗರದ ಜನ ತತ್ತರಿಸಿ ಹೋಗಿದ್ದು ನಾಯಿಗಳ ಹಾವಳಿ ಕಡಿಮೆ ಮಾಡಲು ಅಧಿಕಾರಿಗಳು ಸಜ್ಜಾಗುತ್ತಿಲ್ಲ. ಹೀಗಾಗಿ ನಾಯಿಗಳ ಹಾವಳಿ ಮುಂದುವರೆದಿದೆ. ಬೆಳಗಾವಿಯಲ್ಲಿ ಮಹಿಳೆಯರು ಮಕ್ಕಳು ಹಾಗೂ ವೃದ್ದರ ಮೇಲೆ ನಾಯಿದಾಳಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.















