ಬೆಳಗಾವಿ:
ಕನ್ನಡ ಕಡ್ಡಾಯ ವಿಚಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಗದ್ದಲ ಗಲಾಟೆಯಾದ ಘಟನೆ ನಡೆದಿದೆ.ಕನ್ನಡದಲ್ಲಿ ಸಭೆಯ ನೋಟಿಸ್ ಕೊಟ್ಟಿದ್ದಕ್ಕೆ ಎಂಇಎಸ್ ಪಾಲಿಕೆ ಸದಸ್ಯ ಕ್ಯಾತೆ ತೆಗೆದಿದ್ದಾನೆ.ಪಾಲಿಕೆ ಸದಸ್ಯ ರವಿ ಸಾಳುಂಕೆ ಸೇರಿ ಮೂವರು ಸದಸ್ಯರು ಖ್ಯಾತೆ ತೆಗೆದಿದ್ದಾರೆ. ಸಭೆ ಆರಂಭಾಗುತ್ತಿದ್ದಂತೆ ಪಾಲಿಕೆಯಲ್ಲಿ ಗದ್ದಲು ಶುರುವಾಯ್ತು. ಎಂಇಎಸ್ ನ ಮೂವರು ಸದಸ್ಯರು ವಿರೋಧ ಮಾಡುತ್ತಿದ್ದಂತೆ ಇದಕ್ಕೆ ಕನ್ನಡ ಭಾಷಿಕ ಸದಸ್ಯರೂ ಸಹ ವಿರೋಧ ವ್ಯಕ್ತಪಡಿಸಿದರು. ಎಂಇಎಸ್ ಪಾಲಿಕೆ ಸದಸ್ಯರು ಮಹಾರಾಷ್ಟ್ರಕ್ಕೆ ಹೋಲಗಲಿ ಎಂದು ಕನ್ನಡಿಗ ಸದಸ್ಯರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಮಹಾರಾಷ್ಟ್ರದ ಜತ್ತ ಅಕ್ಕಲಕೋಟೆಯಲ್ಲಿ ಕನ್ನಡಕ್ಕೆ ಅವಕಾಶ ಕೊಡಬೇಕು ಎಂದು ಇದೇ ವೇಳೆ ಒತ್ತಾಯಿಸಲಾಯ್ತು. ಮೂವರು ಎಂಇಎಸ್ ಸದಸ್ಯರಿಂದ ಕಿರಿಕ್ ಆದ ಹಿನ್ನೆಲೆಯಲ್ಲಿ ಪಾಲಿಕೆ ಸಭೆಯನ್ನು ಮುಂದೂಡಲಾಯ್ತು. ಅಝೆಂಡಾ ಪ್ರಕಾರ ಸಭೆ ನಡೆಸುವಂತೆ ಇದೆ ವೇಳೆ ಶಾಸಕ ಅಭಯ್ ಪಾಟೀಲ್ ಒತ್ತಾಯಿಸಿದರು.

