


ಬೆಳಗಾವಿ:
ಸಚಿವ ನಾಗೇಂದ್ರರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಬಿಜೆಪಿ ಮುಖಂಡರು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.ಬೆಳಗಾವಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಅಹೋರಾತ್ರಿ ಹೋರಾಟ ಪ್ರಾರಂಭವಾಗಿದ್ದು ಬೆಳಗಾವಿ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.ವಾಲ್ಮೀಕಿ ಸಮಾಜದ ಹಣ ಲೂಟಿ ಮಾಡಿದ ಬಿ ನಾಗೇಂದ್ರ ವಜಾ ಮಾಡಬೇಕೆಂದು ಆಗ್ರಹಿಸಿ ಹೋರಾಟ ಮಾಡುತ್ತಿದೆ.
ಸಮಾಜದ 187ಕೋಟಿ ಹಣ ಲೂಟಿ ಮಾಡಲಾಗಿದೆ.ಹಣ ಲೂಟಿ ಮಾಡಿರೋದಕ್ಕೆ ಕಾಂಗ್ರೆಸ್ ಹೈಕಮಾಂಡ್ ಉಡುಗೊರೆ ನೀಡಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಇದರ ಜೊತೆಗೆ ಬರ ಪರಿಹಾರ ಘೋಷಣೆ ಮಾಡಬೇಕು. ಸಮಗ್ರ ನೀರಾವರಿ,ವಿಧವಾ ವೇತನ, ಅಂಗವಿಕಲರ ಪಿಂಚಣಿ ತಡೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.ಇದೊಂದುಕಡೆಯಾದರೆ ಅದೇ ಕಾಂಗ್ರೇಸ್ ಸರ್ಕಾರದಲ್ಲಿ ಅದೇ ವಾಲ್ಮೀಕಿ ಸಮುದಾಯದ ಹಿರಿಯ ಸಚಿವರೂ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.ಇನ್ನು ಇದೇ ಜಿಲ್ಲೆಯಿಂದ ಇಬ್ಬರು ಶಾಸಕರು ಹಾಗೂ ಓರ್ವ ಎಂಎಲ್ಸಿ ಇದೇ ಜಿಲ್ಲೆಯಲ್ಲಿದ್ದಾರೆ. ಸದ್ಯ ಬಿಜೆಪಿಯ ಈ ಪ್ರತಿಭಟನೆಗೆ ಅವರು ಹೇಗೆ ಪ್ರತಿಕ್ರಿಯಸುತ್ತಾರೆ ಕಾದು ನೋಡಬೇಕು.ಪ್ರತಿಭಟನೆಯಲ್ಲಿ ಮಾಜಿ ಎಂಪಿ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಅನಿಲ್ ಬೆನಕೆ,ಮಹೇಶ ಕುಮಟಳ್ಳಿ ಸೇರಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಸಚಿವ ಸ್ಥಾನದಿಂದ ನಾಗೇಂದ್ರರನ್ನು ವಜಾ ಮಾಡುವವರಗೆ ತಮ್ಮ ಪ್ರತಿಭಟನೆ ನಿಲ್ಲಲ್ಲ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದು ಸದ್ಯ ಎಲ್ಲಿಯವರಗೆ ಈ ಪ್ರತಿಭಟನೆ ಮುಂದುವರೆಯುತ್ತದೆ ಕಾದು ನೋಡಬೇಕಿದೆ.









