ಬೆಳಗಾವಿ:
ಇಂದಿರಾ ಗಾಂಧಿ ಆಪ್ತ ಕುಟುಂಬದ ಭೂಕಬಳಿಕೆಗೆ ಸಾಥ್ ನೀಡಿದ್ದ ಪಿಡಿಓ ಅಮಾನತು ಮಾಡಿ ಜಿಲ್ಲಾ ಪಂ ಸಿಇಒ ರಾಹುಲ್ ಶಿಂಧೆ ಆದೇಶ ಹೊರಡಿಸಿದ್ದಾರೆ.
ಬೆನಕನಹಳ್ಳಿ ಪಿಡಿಓ ಸುಜಾತಾ ಬಟಕುರ್ಕಿ ಅಮಾನತು ಮಾಡಿ ಆದೇಶ ಹೊರಡಿಸಿದ್ದು ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಪಂ ಪಿಡಿಓ ಆಗಿ ಸುಜಾತಾ ಬಟಕುರ್ಕಿ ಕಾರ್ಯ ನಿರ್ವಹಿಸುತ್ತಿದ್ದರು. ಗ್ರಾಪಂ ವ್ಯಾಪ್ತಿಯ ಗಣೇಶಪುರದಲ್ಲಿ ಡಾ, ಜಯಶ್ರೀ ಎಂಬುವವರು ಎರಡಂತಸ್ತಿನ ಮನೆ ಹೊಂದಿದ್ದರು.ಡಾ. ಜಯಶ್ರೀ ಇಂಧಿರಾ ಗಾಂಧಿ ಆಪ್ತ ವಲಯದಲ್ಲಿದ್ದ ಬಿ. ಶಂಕರಾನಂದ ಅವರ ಪುತ್ರಿಯಾಗಿದ್ದು ನಕಲಿ ದಾಖಲೆ ಸೃಷ್ಟಿಸಿ ಡಾ. ಜಯಶ್ರೀ ಆಸ್ತಿ ಸುನೀಲ ತಳವಾರ ಎಂಬುವವರು ಜಯಶ್ರೀಯವರ ಆಸ್ತಿ ಕಬಳಿಸಿದ್ದ ಆರೋಪ ಕೇಳಿ ಬಂದಿತ್ತು.ಅಲ್ಲದೇ ಡಾ. ಜಯಶ್ರೀಗೆ ಸೇರಿದ ಆಸ್ತಿಯ ತೆರಿಗೆಯನ್ನು ಸುನೀಲ ತಳವಾರ ಪಾವತಿಸಿದ್ದರು.
ಜಿಪಿಎ ದಾಖಲೆ ಪುಟಗಳಲ್ಲಿ ಡಾ. ಜಯಶ್ರೀ ಸಹಿ ವ್ಯತ್ಯಾಸ ಇದ್ದರೂ ತೆರಿಗೆ ಪಾವತಿಗೆ ಅವಕಾಶ ನೀಡಿದ್ದ ಆರೋಪ ಪಿಡಿಒ ಮೇಲೆ ಕೇಳಿ ಬಂದಿತ್ತು.ನಿಯಮಬಾಹಿರವಾಗಿ ಈ ಆಸ್ತಿಯ ನಮೂನೆಯನ್ನು ಸುನೀಲ ತಳವಾರಗೆ ಪಿಡಿಓ ಸುಜಾತಾ ವಿತರಿಸಿದ್ದರು.
ತನಿಖೆ ವೇಳೆ ಸುಜಾತಾ ಕರ್ತವ್ಯ ಲೋಪ ಎಸಗಿದ್ದು ಸಾಭೀತಾದ ಹಿನ್ನೆಲೆ ಸಿಇಒ ರಾಹುಲ್ ಶಿಂಧೆ ಸುಜಾತಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಇಷ್ಟಕ್ಕೆ ಮುಗಿಯದ ಸುಜಾತಾರ ಅಕ್ರಮದ ಪುರಾಣ
ಬೆನಕನಹಳ್ಳಿ ಗ್ರಾಂ ಪಂಚಾಯಿತಿ ಪಿಡಿಓ ಸುಜಾತಾ ಕರಾಮತ್ತು ಒಂದಲ್ಲ, ಎರಡಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ತಮ್ಮ ಅವಧಿಯಲ್ಲಿ ಕಾನೂನು ಬಾಹಿರ ಕೆಲಸ ಮಾಡಿರುವ ಸುಜಾತಾ ಬಟಕುರ್ಕಿ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ನೀಡಿ ಸರ್ಕಾರಕ್ಕೆ ಕೋಟ್ಯಂತರ ನಷ್ಟ ಮಾಡಿದ ಆರೋಪವೂ ಸಹ ಅವರ ಮೇಲಿದೆ.ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಾರದೇ 1448 ಆಸ್ತಿಗಳಿಗೆ ಬಿ. ಖಾತಾ ವಿತರಣೆ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಬೆನಕನಹಳ್ಳಿ ಗ್ರಾಮದಲ್ಲಿ 1261 ಹಾಗೂ ಸಾವಂಗಾವ ಗ್ರಾಮದಲ್ಲಿ 180 ಹೊಸ ಆಸ್ತಿ ಸೃಷ್ಟಿಸಿ 11B ಪಹಣಿ ಪತ್ರ ವಿತರಣೆ ಮಾಡಿದ್ದಾರೆ.ಆ ಮೂಲಕ ರೆರಾ (ರಿಯಲ್ ಎಸ್ಟೇಟ್) ನಿಯಮ ಉಲ್ಲಂಘಿಸಿ ಸುಜಾತಾ ಕರ್ತವ್ಯ ಲೋಪವೆಸಗಿರುವ ಆರೋಪ ಅವರ ಮೇಲಿದೆ.ಸರ್ಕಾರಿ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೂ ಅವಕಾಶ ಮಾಡಿ ಕೊಟ್ಟಿರುವ ಸುಜಾತಾ ಬಟಕುರ್ಕಿ
ಸಾರ್ವಜನಿಕ ಉದ್ದೇಶಕ್ಕೆ, ಉದ್ಯಾನವನಕ್ಕೆ ಮೀಸಲಿಟ್ಟ ಜಾಗ ಭೂಕಬಳಿಕೆ ಅವಕಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಾರ್ವಜನಿಕರು, ಭೂಮಾಲೀಕರು ನೀಡಿದ ದೂರು ಆಧರಿಸಿ ಇಲಾಖಾ ತನಿಖೆ ಕೈಗೊಳ್ಳಲಾಗಿತ್ತು.ತನಿಖೆ ವೇಳೆ ಕರ್ತವ್ಯ ಲೋಪ ಎಸಗಿದ ಸುಜಾತಾ ಬಟಕುರ್ಕಿ ಅಮಾನತು ಮಾಡಿ ಸಿಇಒ ರಾಹುಲ್ ಶಿಂಧೇ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.


