



ಬೆಳಗಾವಿ:
ಐತಿಹಾಸಿಕ ಗಣೇಶ ವಿಸರ್ಜನೆಗೆ ಬೆಳಗಾವಿ ನಗರ ಸಾಕ್ಷಿಯಾಗಿದ್ದು
ಮುಂಬೈ, ಪುಣಾ ಮಹಾನಗರ ಗಳನ್ನೆ ಈ ಬಾರಿಯ ಬೆಳಗಾವಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೀರಿಸಿದೆ.ಸತತ 42 ಗಂಟೆಗಳ ಕಾಲ ನಡೆದ ವಿಸರ್ಜನೆ ಕಾರ್ಯ ನಡೆದಿದ್ದು ಅಂತಿಮವಾಗಿ ನಗರದ ಚಾವಟ ಗಲ್ಲಿಯ ಬೆಳಗಾವಿ ರಾಜಾ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ.ಬೆಳಗಾವಿ ರಾಜಾನಿಗೆ ವಿಸರ್ಜನೆ ಆರತಿ ನೇರವೇರಿಸಿ ಡಿಸಿಪಿ ನಾರಾಯಣ ಬರಮನಿ ವಿಸರ್ಜನೆ ಕೈಂಕರ್ಯಕ್ಕೆ ಅನಿಯಾಗಿದ್ದಾರೆ.ಬೆಳಗಾವಿ ರಾಜಾನಿಗೆ ವಿಶೇಷ ಆರತಿ, ಅಭಿಷೇಕ ಮಾಡಿ ನಂತ ಭಕ್ತಿ ಭಾವದಿಂದ ವಿಸರ್ಜನೆ ಮಾಡಲಾಗಿದ್ದು ಬೆಳಗಾವಿ ರಾಜನಿಗೆ ಆರತಿ ಮಾಡಲೂ ಸಹ ಭಕ್ತರ ಉತ್ಸಾಹ ಕಡಿಮೆಯಾಗಿಲ್ಲ.ಗಣೇಶ ಗಣೇಶ ಮೋರಯಾ ಮುಂದಿನ ವರ್ಷ ಬೇಗಾ ಬಾರಯ್ಯ ಎಂಬ ಘೋಷಗಳೊಂದಿಗೆ ವಿಸರ್ಜನೆ ಮಾಡಲಾಗಿದೆ.ಕಪಿಲೇಶ್ವರನ ಹೊಂಡದಲ್ಲಿ ನಡೆದ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದ್ದು
ನಿರಂತರ ಹಗಲು ರಾತ್ರಿಯನ್ನದೇ ಪೊಲೀಸ್ ಬೀಗಿ ಭದ್ರತೆಯಲ್ಲಿ ಶಾಂತಿಯುತ ವಿಸರ್ಜನೆಗೆ ಈ ಬಾರಿ ಬೆಳಗಾವಿ ಗಣೇಶೋತ್ಸವ ಸಾಕ್ಷಿಯಾಗಿದೆ.











