ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಸೀಟಿಗಾಗಿ ಬಸ್ಸಿನಲ್ಲಿ ಮಹಿಳಾ(ಶಕ್ತಿ) ಪ್ರದರ್ಶನ!ಕಂಡೆಕ್ಟರ್ ಚಾಲಕನನ್ನು ಬಿಡಲಿಲ್ಲ!

ಬೆಳಗಾವಿ:

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಶುರುವಾಗಿದ್ದೆ ಆಗಿದ್ದು ಎಲ್ಲಿ ನೋಡಿದ್ದಲ್ಲಿ ಮಹಿಳೆಯರು ಬಸ್ಸಿನಲ್ಲಿ ಸೀಟಿಗಾಗಿ ಹೊಡೆದಾಡುವ ಹಾಗೂ ಮಹಿಳಾ ಶಕ್ತಿಯ ನಡುವೆ ಪುರುಷರು ಮಂಕಾಗಿ ನಿಲ್ಲುವ ದೃಶ್ಯಗಳು ಕಂಡು ಬರುತ್ತಲೇ ಇವೆ. ಸಧ್ಯ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಸೀಟಿಗಾಗಿ ಮಹಿಳೆಯರು ಹೊಡೆದಾಡಿಕೊಂಡ ಘಟನೆ ನಡೆದಿದೆ‌.ಬೆಳಗಾವಿ ಗುಡ್ಡಾಪುರ ಬಸ್ ನಲ್ಲಿ ಮಹಿಳೆಯರ ಬಡಿದಾಡಿಕೊಂಡ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರ ವಲಯದಲ್ಲಿ ಘಟನೆ ನಡೆದಿದೆ.ಬಸ್ ನಲ್ಲಿ ಸೀಟ್ ಗಾಗಿ ಬೈಯ್ದಾಡಿಕೊಂಡು ಮಹಿಳೆಯರು ರಂಪಾಟ ಮಾಡಿಕೊಂಡಿದ್ದಾರೆ.ಬಸ್ ನಿಲ್ಲಿಸಿ ಮಹಿಳೆಯರು ಜಗಳವನ್ನು ಸಹ ಪ್ರಯಾಣಿಕರು ಬಿಡಿಸಿದ ಘಟನೆ ನಡೆದಿದೆ.
ಈ ವೇಳೆ ಬಸ್ ಕಂಡಕ್ಟರ್, ಡ್ರೈವರ್ ಗೂ ಅವಾಚ್ಯವಾಗಿ ಮಹಿಳೆಯರು ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ ಎನ್ನಲಾಗಿದ್ದುಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply

error: Content is protected !!