



ಬೆಳಗಾವಿ:
ಗಣೇಶ ಚತುರ್ಥಿಯ ದಿನವೇ ಮನೆಯಲ್ಲಿನ ಪ್ರಿಡ್ಜ್ ಸ್ಪೋಟಗೊಂಡು ಬೆಳಗಾವಿಯ ಚೌವ್ಹಾಟ ಗಲ್ಲಿಯ ಧಮೋನೆ ಕುಟುಂಬದ ಆರು ಜನ ಸಜೀವ ದಹನವಾಗಿದ್ದರು.ಆದರೆ ಈ ಘೋರ ದುರಂತಕ್ಕೆ ಈಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.ಸಿಸಿಟಿವಿಯಲ್ಲಿ ಓಡಿಡಿದಾ ವ್ಯಕ್ತಿಯಿಂದ ಈಗ
ಅನುಮಾನ ಹುಟ್ಟಿಸುವಂತೆ ಮಾಡಿದೆ.ಇಂತಹದೊಂದು ಅನುಮಾನಕ್ಕೆ ಕಾರಣಾವಗಿರೋದು ಸಿಸಿ ಕ್ಯಾಮೆರಾ ದೃಶ್ಯಾವಳಿಗಳು, ಹೌದು ಬೆಂಕಿ ಅವಘಡಕ್ಕೂ ಮುನ್ನ ಬಕೆಟ್ ಹಿಡಿದು ಓಡಾಡಿದ ಅಪರಿಚತನ ಮೇಲೆ ಅನುಮಾನ ಮೂಡಿದ್ದು ಬಕೆಟ್ ಹಿಡಿದು ಬಂದು 5 ನಿಮಿಷದಲ್ಲೇ ಖಾಲಿ ಕೈಯಲ್ಲಿ ಓಡಿ ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಿಸಿ ಕ್ಯಾಮರಾದಲ್ಲಿ ವ್ಯಕ್ತಿಯ ಅನುಮಾನಾಸ್ಪದ ಚಲನವಲನ ಸೆರೆಯಾಗಿದೆ.ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಹಿಂದೆ ಕೊಲೆ ಶಂಕೆ ಶುರುವಾಗಿದ್ದು 6 ಜನರ ದಾರುಣ ಸಾವಿನ ಪ್ರಕರಣದಲ್ಲಿ ಅಪರಿಚಿತನ ಮೇಲೆ ಅನುಮಾನ ಸೃಷ್ಟಿಯಾಗಿದೆ.
ಶೆಡ್ ಬಳಿ ಬಂದು ಹೋಗಿದ್ದ ಆಗಂತುಕ ಯಾರು?ಬಕೆಟ್‌ನಲ್ಲಿ ಏನಿತ್ತು? ಸ್ಫೋಟಕ್ಕೂ ಮುನ್ನ ನಡೆದಿದ್ದೇನು? ಎಂದು ಈಗ ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಘಟನೆಯು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆ ವ್ಯಕ್ತಿ ಯಾರೆಂದು ಎನ್ನುವ ನಿಟ್ಟಿನಲ್ಲೂ ಸಹ ಪೊಲೀಸರು ತನಿಖೆ ಶುರು ಮಾಡಿದ್ದಾರೆ.









