ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಂತ್ಯಕ್ರಿಯೇಗೆ ಹೋದವರು ಆಸ್ಪತ್ರೆ ಪಾಲು!ಸ್ಮಶಾನದಲ್ಲಿ ಬುದ್ಧಿ ಹೇಳಿದ್ದಕ್ಕೆ ಗಲಾಟೆ!

ಬೆಳಗಾವಿ:

ಅವ್ಯಾಚ್ಯ ಪದಗಳಿಂದ ಬೈದು ನಿಮ್ಮ ತಂದೆಗೆ ಬುದ್ದಿ ಹೇಳು ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದಿದೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಅವ್ಯಾಚ್ಛ ಶಬ್ದಗಳಿಂದ ನಿಂದನೆ ಆರೋಪ ಕೇಳಿ ಬಂದಿದ್ದು ನಿಮ್ಮ ತಂದೆ ಅವ್ಯಾಚ್ಛ ಶಬ್ದಗಳಿಂದ ಬೈಯುತ್ತಿದ್ದಾನೆ ಆತನಿಗೆ ತಿಳಿಸಿ ಹೇಳು ಅಂದಿದ್ದಕ್ಕೆ ಕೆಲವರಿಂದ ಮಾರಣಾಂತಿಕ ಹಲ್ಲೆಯಾಗಿದೆ.ಬೈತ್ತಿದ್ದೀಯಾ ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ರಾತ್ರಿ ಮನೆಗೆ ಬಂದು ಮಾರಣಾಂತಿಕೆ ಹಲ್ಲೆ ನಡೆಸಲಾದ ಆರೋಪ ಕೇಳಿ ಬಂದಿದ್ದು ಏಕಾಏಕಿ 15 ಕ್ಕಿಂತ ಹೆಚ್ಚಿನ ಜನರು ಬಂದು ಬಾಗಿಲು ಮುರಿದು ಹಲ್ಲೆ ಮಾಡಿರುವ ಆರೋಪ. ಮಾಡಲಾಗಿದೆ.ಸದ್ಯ ಹಲ್ಲೆಗೊಳಗಾದವರನ್ನು ರುದ್ರಪ್ಪಾ ಸೇರಿ ಕುಟುಂಬಸ್ಥರು ಎಂದು ಗುರುತಿಸಲಾಗಿದ್ದು
ರುದ್ರಪ್ಪಾ ಹಾಗೂ ಮನೆಯಲ್ಲಿದ್ದ ಸಣ್ಣ ಮಕ್ಕಳು ಸೇರಿದಂತೆ ರುದ್ರಪ್ಪನ ತಂದೆ ತಾಯಿ ಮೇಲೆಯೂ ಸಹ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.ಕೈ,ಕಾಲು,ತಲೆ,ಬೆನ್ನು ಸೇರಿ ಅನೇಕ ಕಡೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಸಲಾಗಿದೆ.
ಕಬ್ಬಿಣದ ರಾಡ್,ಕಟ್ಟಿಗೆ ಸೇರಿ ವಿವಿಧ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗುದ್ದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ. ನಡೆಸಿದ್ದಾರೆ. ಅಲ್ಲದೇ ತಕ್ಷಣ ಹಲ್ಲೆಗೊಳಗಾದವರನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!