Uncategorized

ಮಾನವೀಯತೆ ಮರೆತ ಬೀಮ್ಸ್ ಸಿಬ್ಬಂಧಿ! ಪ್ರತಿಭಟಿಸಿ ಬಿಸಿ ಮುಟ್ಟಿಸಿದ ಸಮಾಜ ಸೇವಕ!

ಬೆಳಗಾವಿ:

ಸರ್ಕಾರ ಬಡವರಿಗೆ ಉತ್ತಮ ಆರೋಗ್ಯ ಸೇವೆಗಳು ಸಿಗಲಿ ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉತ್ತಮ ಆಸ್ಪತ್ರೆಗಳು‌ ಅಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಲಾಕ್ಷಾಂತರ ರೂಪಾಯಿ ಸಂಬಳ ನೀಡಿ ಕೆಲಸಕ್ಕೆ ನಿಯೋಜಿಸಿದೆ. ಆದರೆ ಸರ್ಕಾರದ ಆಶಯ ಬರೀ ಹೇಳಿಕೊಳ್ಳೊಕೆ ಮಾತ್ರವಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಗೆಯಲ್ಲಿ ಅಡ್ಮಿಟ್ ಆಗಿದ್ದ ವೃದ್ದನನ್ನು ಹೊರಹಾಕಿ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯ ಸಿಬ್ಬಂಧಿಗಳು ಅಮಾನವೀಯವಾಗಿ ವರ್ತಿಸಿದ ಘಟನೆ ‌ಬೆಳಕಿಗೆ ಬಂದಿದೆ.

ಅರ್ಜುನ್ ತಾರಿಹಾಳ ಎಂಬ(70) ವರ್ಷದ ವ್ಯಕ್ತಿ ಕಳೆದ ಎರಡು ತಿಂಗಳ ಹಿಂದೆ ಚಿಕಿತ್ಸೆಗಾಗಿ ಬೆಳಗಾವಿಯ ಬೀಮ್ಸ್ ಆಸ್ಪತ್ರಗೆ ದಾಖಲಾಗಿದ್ದರು. ಆಸ್ಪತ್ರೆಯ ಸಿಬ್ಬಂಧಿ ಅರ್ಜುನ್ ಅವರನ್ನು ದಾಖಲಿಸಿಕೊಂಡಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಅರ್ಜುನ್ ಇವರಿಗೆ ಯಾವುದೇ ಟೆಸ್ಟ್ ಮಾಡದೇ ಇರುವ ಆರೋಪ ಬೀಮ್ಸ್ ಸಿಬ್ಬಂಧಿಗಳ ಮೇಲೆ ಕೇಳಿ ಬಂದಿದೆ. ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇದ್ದರೂ ಸಹ ಅರ್ಜುನ್ ಅವರಿಗೆ ಯಾವುದೇ ಟೆಸ್ಟ್ ನಡೆಸದೆ ಅವರನ್ನು ಅಮಾನವೀಯವಾಗಿ ಆಸ್ಪತ್ರೆಯಿಂದ ಹೊರಹಾಕಲಾದ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಿಂದ ವೃದ್ದ ಅರ್ಜುನ್ ಅವರನ್ನು ಹೊರಹಾಕಿದ ವಿಚಾರ ಸಾಮಾಜಿಕ ಹೋರಾಟಗಾರ ಶಂಕರ್ ಪಾಟೀಲ್ ಅವರ ಗಮನಕ್ಕೆ ಬಂದಿದ್ದು ತಕ್ಷಣವೇ ವೃದ್ದನನ್ನು ಕರೆದುಕೊಂಡು ಶಂಕರ್ ಪಾಟೀಲ್ ಆಸ್ಪತ್ರೆಯ ಮುಂದೆ ಧರಣಿ ಕುಳಿತಿದ್ದಾರೆ. ಶಂಕರ್ ಪಾಟೀಲ್ ಧರಣಿ ಕೂರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೀಮ್ಸ್ ನಿರ್ದೇಶಕ ಅಶೋಕ್ ಶೆಟ್ಟಿ ಅಹವಾಲು ಆಲಿಸಿ ವೃದ್ದನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿಕೊಂಡು ವೃದ್ದನನ್ನು  ಹೊರಹಾಕಿದ ಸಿಬ್ಬಂಧಿಯ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಶೆಟ್ಟಿ ಭರವಸೆಯ ಹಿನ್ನೆಲೆಯಲ್ಲಿ ಶಂಕರ್ ಪಾಟೀಲ್ ಧರಣಿ ಕೈ ಬಿಟ್ಟಿದ್ದಾರೆ. ಬಡವರಿಗಾಗಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದರೂ ಸಹ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾದ ಸ್ಥಿತಿ ಇರುವುದಂತೂ ಸತ್ಯ

ಆಸ್ಪತ್ರೆಯಿಂದ ಹೊರಹಾಕಲ್ಪಟ್ಟಿದ್ದ ವೃದ್ದ ಅರ್ಜುನ್!
TV24 News Desk
the authorTV24 News Desk

Leave a Reply

error: Content is protected !!