ಜಿಲ್ಲೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ವಿಟಿಯುಗೆ ಅನುದಾನ ನೀಡುವ ಬದಲು ವಿಟಿಯುವಿನಿಂದಲೇ ಹಣ ಕೇಳಿದ ಸರ್ಕಾರ!

ಬೆಳಗಾವಿ:

ವಿಟಿಯು ಖಜಾನೆಯಲ್ಲಿರುವ 610 ಕೋಟಿ ಮೇಲೆ ಬಿತ್ತು ರಾಜ್ಯ ಸರ್ಕಾರದ ಕಣ್ಣು ಬಿದ್ದಿದೆ.
ಶ್ವೇತಪತ್ರ ಹೊರಡಿಸುವಂತೆ ಬಿಜೆಪಿಯ ಆಗ್ರಹದ ಮಧ್ಯೆಯೇ ಹಣ ನೀಡುವಂತೆ ವಿಟಿಯು ಬಾಗಿಲನ್ನು ಸರ್ಕಾರ ತಟ್ಟಿದೆ.
ವಿಟಿಯುಗೆ ಸೇರಿದ 610 ಕೋಟಿ ರೂ ಪೈಕಿ 250 ಕೋಟಿ ನೀಡುವಂತೆ ಪತ್ರ ಬರೆಯಲಾಗಿದ್ದು ಸಿಎಸ್ ಶಾಲಿನಿ ರಜನೀಶ್ ಅವರಿಂದ ವಿಟಿಯು ವಿಸಿ ಪ್ರೊ. ವಿದ್ಯಾಶಂಕರ್‌‌ಗೆ ಪತ್ರ ಬಂದಿದೆ.
ಬೆಂಗಳೂರಿನ ಯುವಿಸಿಎ ಅಭಿವೃದ್ಧಿಗೆ 250 ಕೋಟಿ ನೀಡುವಂತೆ ಪತ್ರದಲ್ಲಿ ಕೋರಲಾಗಿದ್ದು ಸರ್ಕಾರದ ಸ್ವಾಮ್ಯದಲ್ಲಿ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಇದ್ದು
ವಿಟಿಯುಗೆ ಅನುದಾನ ಕೊಟ್ಟು ನೆರವಾಗಬೇಕಿದ್ದ ರಾಜ್ಯ ಸರ್ಕಾರದಿಂದಲೇ ಈಗ ವಿವಾದಾತ್ಮಕ ಬೇಡಿಕೆ ಬಂದಿದೆ.
ಹಲವು ವರ್ಷಗಳಿಂದ ಅನುದಾನ ನೀಡದೇ ಈಗ ವಿವಿಯಿಂದಲೇ ಹಣ ಕೇಳ್ತಿರುವ
ಸರ್ಕಾರದ ಮನವಿ ನಯವಾಗಿ ವಿಟಿಯು ಆಡಳಿತ ಮಂಡಳಿ ತಿರಸ್ಕರಿಸಿದೆ.
ಇನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಬಳಿ 610 ಕೋಟಿ ಬಂದಿದ್ದು ಎಲ್ಲಿಂದ ಎಂದು ನೋಡುತ್ತ ಹೋದರೆ 2014 ರಲ್ಲಿ ಆದಾಯ ತೆರಿಗೆ ಇಲಾಖೆಯಿಂದ ವಿಟಿಯು ಮೇಲೆ ದಾಳಿ ನಡೆದಿತ್ತು.
ತೆರಿಗೆ ಪಾವತಿಸಿಲ್ಲ ಎಂದು ಕಾರಣ ಕೊಟ್ಟು 400 ಕೋಟಿ ಹಣವನ್ನು ಐಟಿ ಜಪ್ತಿ ಮಾಡಿತ್ತು.
ತೆರಿಗೆ ವಿನಾಯಿತಿ ಪಡೆಯಲು 12 ಎ ಅರ್ಜಿ ಸಲ್ಲಿಸಿಲ್ಲ ಎಂದು ಅಂದು ಐಟಿ ದಾಳಿ ಮಾಡಿತ್ತು.
ಐಟಿಗೆ 12-ಎ ಅರ್ಜಿ ಸಲ್ಲಿಸುವ ಸರ್ಕಾರದ ಶಿಕ್ಷಣ ಸಂಸ್ಥೆಗಳಿಗೆ ಇದೆ ತೆರಿಗರ ವಿನಾಯಿತಿ ಇದ್ದು
ಐಟಿಗೆ ದಾಖಲೆಗಳನ್ನು ನೀಡಿ ಬಡ್ಡಿ ಸಮೇತ 610 ಕೋಟಿ ಹಣವನ್ನು ವಿಟಿಯು ಪಡೆದಿದೆ.
ಆದಾಯ ತೆರಿಗೆ ಇಲಾಖೆಯಿಂದ ಇನ್ನೂ ವಿಟಿಯುಗೆ 90 ಕೋಟಿ ಹಣ ಬರಬೇಕಾಗಿದೆ.ವಿಟಿಯು ಖಜಾನೆಗೆ 610 ಕೋಟಿ ಬರುತ್ತಿದ್ದಂತೆ 250 ಕೋಟಿ ಕೊಡಿ ಎಂದು ಸರ್ಕಾರದ ಪತ್ರ ಬಂದಿದ್ದು 610 ಕೋಟಿ ಪೈಕಿ 500 ಕೋಟಿ ಹಣವನ್ನು ವಿಟಿಯು ಕುಲಪತಿ ಪ್ರೊ ವಿದ್ಯಾಶಂಕರ ಪಿಕ್ಸ್ ಡಿಪಾಸಿಟ್ ಮಾಡಿದ್ದಾರೆ.ಡಿಪಾಜಿಟ್ ಹಣದ ಬಡ್ಡಿಯನ್ನು ಮುಂದಿನ 10 ವರ್ಷದ ನಂತರ ಸಿಬ್ಬಂದಿ ಸ್ಯಾಲರಿಗೆ ಬಳಸಲು ಪ್ಲ್ಯಾನ್ ಮಾಡಲಾಗಿದ್ದು ಸರ್ಕಾರ ಸಂಬಳ ನೀಡದಿದ್ದರೂ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಕುಲಪತಿಗಳ ಪ್ಲ್ಯಾನ್ ಮಾಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!