ಬೆಳಗಾವಿ:
ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಎಸ್ಸಿ ಸಮಾಜದಿಂದ ಇಂದು ರವಿವಾರ ಚಿಕ್ಕಬಾಗೇವಾಡಿ ಗ್ರಾಮದ ಬಾಬು ಜಗಜೀವನರಾಮ ಸಭಾಭವನದಲ್ಲಿ ಅಂಬೇಡ್ಕರ್ ಶಕ್ತಿ ಸಂಘದ ಉದ್ಘಾಟನೆ ಪೂರ್ವಭಾವಿ ಸಭೆ ನಡೆಯಿತು
ಈ ಸಭೆಯಲ್ಲಿ ಅಂಬೇಡ್ಕರ್ ಶಕ್ತಿ ಸಂಘದ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರ ನೇತೃತ್ವದಲ್ಲಿ ಸಭೆ ನಡೆಯಿತು ಈ ಸಭೆಯಲ್ಲಿ ದಲಿತ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಚರ್ಚೆ ನಡೆಸಲಾಯಿತು. ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮಾಜಗಳಿ ಸಂಘಟನೆ,ಶಿಕ್ಷಣ, ಹೋರಾಟವನ್ನ ಅಳವಡಿಸಿಕ್ಕೊಂಡಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲಿಕೆ ಅನುಕೂಲ ಎನ್ನುವ ಉದ್ದೇಶದಿಂದ ಇಟ್ಟುಕೊಂಡು ಅಂಬೇಡ್ಕರ್ ಅವರ ಆಶಯದಂತೆ ಇಂದು ದಲಿತ ಸಮಾಜಗಳನ್ನ ಒಟ್ಟುಗೂಡಿಸಲು ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು ಪರಿಶ್ರಮ ಪಡುತ್ತಿದ್ದು ಆದ್ದರಿಂದ ದಲಿತ ಸಮಾಜಗಳು ಅನೇಕ ಯೋಜನೆಗಳಿಂದ ವಂಚಿತರಾಗುತ್ತಿದ್ದು ಸರ್ಕಾರದ ಯೋಜನೆಗಳನ್ನ ಹೇಗೆ ಪಡೆದುಕ್ಕೊಳ್ಳಬೇಕು ಹಾಗೆಯೇ ಜಿಲ್ಲೆಯ ಕೆಲ ಗ್ರಾಮಗಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಆಗುತ್ತಿರುವ ದಬ್ಬಾಳಿಕೆ ಖಂಡಿಸಿ ಸಮಾಜದಲ್ಲಿ ಸಂಘಟನೆ ಬಹಳ ಮುಖ್ಯ ಎಂದು ತಿಳಿಸುವ ಮೂಲಕ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಶಕ್ತಿ ಸಂಘಟನೆಯನ್ನ ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡುವ ವಿಚಾರ ಮಾಡಲಾಯಿತು ಈ ಸಂದರ್ಭದಲ್ಲಿ ಬೈರು ಮೇತ್ರಿ, ಸಾಗರ ಕೋಲಕಾರ,
ಸಾಗರ ಪೂಜೇರಿ,ಶಿವಾಜಿ ಗೊರವ,ಗಂಗಪ್ಪಾ ಕುಂಬಳಿ,ಸೇರಿದಂತೆ ವಿವಿಧ ಯುವ ಮುಖಂಡರು ಭಾಗಿಯಾಗಿದ್ದರು












