ಚಿಕ್ಕೋಡಿ:
ಸರಿಯಾದ ಸಮಯಕ್ಕೆ ಬಸ್ ಬಾರದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಸಾರಿಗೆ ನಿಗಮದ ಅಧ್ಯಕ್ಷರ ಕ್ಷೇತ್ರದ ಪಕ್ಕದ ಕ್ಷೇತ್ರದಲ್ಲಿಯೇ ಮಕ್ಕಳು ಬಸ್ ನ ಫುಟ್ ಬೋರ್ಡ್ ಮೇಲೆ ನಾತಾಡುತ್ತ ಶಾಲೆಗೆ ಹೋಗುಗ ದೃಶ್ಯಗಳು ಕಾಮನ್ ಆಗಿಗೆ.ಹಳ್ಳಿಗಿರೋ ಒಂದೇ ಬಸ್ ಜೋತು ಬಿದ್ದು ವಿದ್ಯಾರ್ಥಿಗಳು ಪ್ರಯಾಣ ಬೆಳಸುವ ಅನಿವಾರ್ಯ ಸ್ಥಿತಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ತಾಮದಲ್ಲಿ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ವಿದ್ಯಾರ್ಥಿಗಳು ಪರದಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಬಸ್ ನ ಫುಡ್ ಬೋರ್ಡ್ ಮೇಲೆ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನೇತು ಬಿದ್ದು ಬಸ್ ಪ್ರಯಾಣ ಮಾಡುತ್ತಿರುವುದು ಕಂಡು ಬಂದಿದೆ. ಚೂರು ಆಯತಪ್ಪಿದರೂ ಸಹ ಪ್ರಾಣಕ್ಕೆ ಸಂಚಕಾರ ಆಗುವ ಎಲ್ಲಾ ಸಾಧ್ಯತೆಗಳು ಇವೆ.ಝುಂಜರವಾಡ ಗ್ರಾಮದಿಂದ ಅಥಣಿಗೆ ಪ್ರಯಾಣ ಬೆಳೆಸಲು ಒಂದೇ ಬಸ್ ಇದ್ದು ವಿದ್ಯಾರ್ಥಿಗಳು ಮತ್ತು ಬಸ್ ಪ್ರಯಾಣ ಬೆಳೆಸುವ ನಾಗರೀಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬಸ್ ಫುಲ್ ಆಗಿ ವಿದ್ಯಾರ್ಥಿಗಳು ಬಸ್ ನ ಫುಟ್ ಬೋರ್ಡ್ ಮೇಲೆ ನೇತು ಬಿದ್ದು ಶಾಲಾ ಕಾಲೇಜುಗಳಿಗೆ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾಗಿದೆ. ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಪ್ರತಿನಿಧಿಸುವ ಕಾಗವಾಡ ಪಕ್ಕದ ಕ್ಷೇತ್ರವಾದ ಅಥಣಿ ಕ್ಷೇತ್ರದಲ್ಲಿ ಈ ದುಸ್ಥಿತಿ ವಿದ್ಯಾರ್ಥಿಗಳಿಗೆ ಬಂದೊದಗಿದ್ದು ನಿತ್ಯ ಶಾಲಾ ಕಾಲೇಜುಗಳಿಗೆ ಹೊರಡಲು ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ನಿತ್ಯ ಇದೇ ರೀತಿ ಸಾಗುವುದು ನಮ್ಮ ಗೋಳಾಗಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನಮ್ಮ ಗೋಳು ಕೇಳುತ್ತಿಲ್ಲ ಎಂದು ವಿದ್ಯಾರ್ಥಿಗಳು ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಶೀಘ್ರವೇ ಮತ್ತೊಂದು ಬಸ್ ವ್ಯವಸ್ಥೆ ಮಾಡುವಂತೆ ಮೊರೆ ಇಟ್ಟಿದ್ದಾರೆ.













