Uncategorized

ಗಂಡನ ಹೆಣ ಉರುಳಿಸಿ ಪಕ್ಕದ ಬೆಡ್ ನಲ್ಲಿ ಮೊಬೈಲ್ ನಲ್ಲಿ ಮಗ್ನಳಾದಳಾ ಪತ್ನಿ?

ಧಾರವಾಡ:

ಪತ್ನಿಯೇ ತನ್ನ ಗಂಡನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಪ್ರಕರಣ ಧಾರವಾಡಲ್ಲಿ ನಡೆದಿದೆ.ಅನಸ್ಥೇಷ್ಯಾ ಇಂಜೆಕ್ಷನ್ ಕೊಟ್ಟು ಗಂಡನ ಕೊಲೆಗೈದಿರುವ ಶಂಕೆ ವ್ಯಕ್ತವಾಗುತ್ತಿದ್ದು ಅನೆಸ್ತೇಶಿಯಾ ಇಂಜೆಕ್ಷನ್ ಕೊಟ್ಟ ಬಳಿಕ ಚಾಕುವಿನಿಂದ ಇರಿದು ಕೊಲೆ ನಡೆಸಿದ ಆರೋಪ ಕೇಳಿ ಬಂದಿದೆ.ಕೊಲೆಯಾದ ವ್ಯಕ್ತಿಯನ್ನು ಡಾ!ಕಿರಣ್ ಹೊಣನ್ನವರ(45)ಎಂದು ಗುರುತಿಸಲಾಗಿದೆ.ಗಂಡನ ಕೊಲೆ ಬಳಿಕ ಮಗನ ಮೇಲೂ ಚಾಕುವಿನಿಂದ ಮಹಾತಾಯಿ ಇರಿದಿದ್ಷು ಧಾರವಾಡ ರಂಕಾ ಸ್ಟೆಲ್ಲಾ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ.ಚಾಕು ದಾಳಿಯಾಗಿ ಗಂಭೀರ ಸ್ಥಿತಿಯಲ್ಲಿ ರಕ್ತದ ಮಡುವಲ್ಲಿ ಬಿದ್ದಿದ ಮಗು ಉಸಿರಾಡುವುದನ್ನ ಗಮನಿಸಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕೊಲೆ ಆರೋಪಿ ಪ್ರಿಯಾಂಕ್ ಕಿರಣ್ ಪತ್ನಿಯಾಗಿದ್ದು ವೃತ್ತಿಯಿಂದ ನೇತ್ರತಜ್ಞೆಯಾಗಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಕೊಲೆಯಾದ ಡಾ. ಕಿರಣ್ ಹೊಣನ್ನವರ್ ಧಾರವಾಡದಲ್ಲಿ ಹೆಸರಾಂತ ಅನಸ್ಥೇಷ್ಯಾ ವೈದ್ಯರಾಗಿದ್ದರು.ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಕಿರಣ್ ಸುಮಾರು 15 ವರ್ಷಗಳಿಂದ ಧಾರವಾಡದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಮೊದಲ ಪತ್ನಿ ಡಿವೋರ್ಸ್ ನೀಡಿದ ಬಳಿಕ ಪ್ರಿಯಾಂಕಾಳನ್ನು ಕಿರಣ್ ಮದುವೆಯಾಗಿದ್ದರು ಎನ್ನಲಾಗಿದೆ. ಎರಡನೇ ಮದುವೆಯಾದ ಪತ್ನಿ ಪ್ರಿಯಾಂಕಾಳಿಂದಲೇ ಕೊಲೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಗಂಡನ ಕೊಲೆಗೈದು, ಮಗನಿಗೆ ಚಾಕು ಇರಿದು ಪ್ರಿಯಾಂಕಾ ಪಕ್ಕದ ಬೆಡ್ ನಲ್ಲಿ ಮೊಬೈಲ್ ನೋಡುತ್ತ ಕುಳಿತಿದ್ದಳು ಎನ್ನಲಾಗಿದೆ. ಗಂಡನ ಕೊಲೆಯ ನಂತರ ತಾನೂ ಅನೆಸ್ತೇಶಿಯಾ ಇಂಜೆಕ್ಷನ್ ತಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಶಂಕೆಯೂ ಸಹ ವ್ಯಕ್ತವಾಗಿದೆ. ಕೊಲೆಯಾದ ಡಾ!ಕಿರಣ್ ಕುಟುಂಬಸ್ಥರು ಪತ್ನಿ ಪ್ರಿಯಾಂಕಾ ಮೇಲೆ ಆರೋಪ ಮಾಡುತ್ತಿದ್ದು ಯಾಕಾಗಿ ಕೊಲೆಯಾಗಿದೆ. ನೆಯ ನಿಜಕ್ಕೂ ತನ್ನ ಗಂಡ ಹಾಗೂ ಮಗನ ಮೇಲೆ ಪತ್ನಿ ಪ್ರೀಯಾಂಕಾಳೆ ಹಲ್ಲೆ ಮಾಡಿದಳಾ ಎನ್ನುವ ಪ್ರಶ್ನೆಗಳಿಗೆ ಪೊಲೀಸರ ತನಿಖೆಯೇ ಉತ್ತರ‌ ನೀಡಬೇಕಿದೆ.

TV24 News Desk
the authorTV24 News Desk

Leave a Reply