


ಬೆಳಗಾವಿ:
ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಪ್ರಾಣ ರಕ್ಷಣೆ ಮಾಡಲಾಗಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬಳಿಯ ಮಲಪ್ರಭಾ ನದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಯುವತಿ ನದಿಗೆ ಹಾರಿದ್ದಳು.ಸುಮಾರು 120 ಅಡಿ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯುವತಿ ಯತ್ನಿಸಿದ್ದಳು.ಕೂಡಲೇ ನದಿಯಲ್ಲಿ ಮುಳುಗುತ್ತಿದ್ದ ಯುವತಿಯನ್ನು ಕಂಡು ಅಲ್ಲಿಯೇ ಮಲ್ಲಿಕಾರ್ಜುನ ಗಾಣಿಗೇರ ಎಂಬುವವರು ಯುವತಿಯ ಪ್ರಾಣ ರಕ್ಷಣೆ ಮಾಡಿದ್ದಾರೆ.ಭಾರೀ ಪ್ರಮಾಣದ ನೀರಿನ ಸೆಳೆತದ ಮಧ್ಯೆಯೂ ಮಲ್ಲಿಕಾರ್ಜುನ್ ತಮ್ಮ ಪ್ರಾಣದ ಹಂಗು ತೊರೆದು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.ಮಲ್ಲಿಕಾರ್ಜುನ ಸಾಹಸ ಕಾರ್ಯಕ್ಕೆ ಪೊಲೀಸರು ಹಾಗೂ ಸ್ಥಳೀಯರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇತ್ತ ಯುವತಿ ಆತ್ಮಹತ್ಯಗೆ ಯಾಕಾಗಿ ಪ್ರಯತ್ನಿಸಿದಳು ಎನ್ನುವುದು ಇನ್ನೂ ನಿಗೂಢವಾಗಿದ್ದು ಪೊಲೀಸ್ ತನಿಖೆಯ ನಂತರವಷ್ಟೇ ಸತ್ಯಾಂಶ ಹೊರ ಬರಬೇಕಿದೆ.








