Uncategorized

ನೀಟಾಗಿರದ ನೀಟ್ ಪ್ರಕರಣದ ವಿರುದ್ಧ ಬೆಳಗಾವಿಯಲ್ಲಿ ಯುವಕಹಳೆ! ಅಮನ್ ಸೇಠ್ ನೇತೃತ್ವದಲ್ಲಿ ಪ್ರತಿಭಟನೆ!

ಮಳೆಯ ನಡುವೆಯೇ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅಮನ್ ಸೇಠ್ ಭಾಷಣ.
ಪ್ರತಿಭಟನೆಯಲ್ಲಿ ನೂರಾರು ಯುವಕರು ಭಾಗಿ.

ಬೆಳಗಾವಿ:

ದೆಹಲಿಯ ಜಂಥರ್ ಮಂಥರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾತ್ಮಕತೆಗೆ ತಿರುಗಿದ್ದು ಯುವಕರನ್ನು ಕೆರಳಿಸಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದಲ್ಲೂ ಸಹ ಉತ್ತಮ ಬೆಂಬಲ ಸಿಗುತ್ತದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಭವಿಷ್ಯಕ್ಕೆ ಕುತ್ತು ಬಂದು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲಾಯ್ತು. ಬೆಳಗಾವಿಯ ಉತ್ತರ ಕ್ಷೇತ್ರದ ಶಾಸಕ ಅಸೀಪ್ ರಾಜು ಸೇಠ್ ಅವರ ಪುತ್ರ ಅಮನ್ ಸೇಠ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ನೆಡೆಸಲಾಯ್ತು. ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾದರು.ಬೆಳಗಾವಿಯ ಚನ್ನಮ್ಮ ವೃತ್ತದಿಂದ ಪ್ರಾರಂಭಾವದ ಯುವಕರ ಪ್ರತಿಭಟನೆ ಡಿಸಿ ಕಚೇರಿಯನ್ನು ಸುತ್ತುವರೆದು ಮತ್ತೆ ಚನ್ನಮ್ಮ ವೃತ್ತದಲ್ಲಿ ಬಂದು ಕೊನೆಗೊಂಡಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಅಸೀಪ್ ಸೇಠ್ ಪುತ್ರ ಅಮನ್ ಸೇಠ್ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು ಬಿದ್ದಿದೆ. ಅಲ್ಲದೇ ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದನ್ನು ಪ್ರಶ್ನೆ ಮಾಡಿದರೆ ಸರ್ಕಾರ ಲಾಠಿ ಪ್ರಯೋಗದಂತ ಕ್ರಮಕ್ಕೆ ಕೈ ಹಾಕುತ್ತಿದೆ ಎಂದರು. ಅಲ್ಲದೇ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಗಳ ಹೆಸರನ್ನು ಅಮನ್ ಸೇಠ್ ಓದಿ ಹೇಳಿದರು. ಅಲ್ಲದೇ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು. ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮಳೆಯ ನಡುವೆಯೇ ಚನ್ನಮ್ಮ ವೃತ್ತದಲ್ಲಿ ಯುವಕರು ಪ್ರತಿಭಟಿಸಿ ಗಮನ ಸೆಳೆದರು.

TV24 News Desk
the authorTV24 News Desk

Leave a Reply

error: Content is protected !!