


ಬೆಳಗಾವಿ:
ಮೆನಯಲ್ಲಿ ಯಾರು ಇಲ್ಲದ ವೇಳೆ 58 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಖದೀಮನನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿವಗುಂಡಿ ಗ್ರಾಮದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೈಲಹೊಂಗಲ ಪೊಲೀಸರು ಭೇದಿಸಿದ್ದಾರೆ.ಗ್ರಾಮದ ಮಹಾಂತೇಶ ಬಸಪ್ಪ ಬೋಗೂರ ಹಾಗೂ ಅವರ ಕುಟುಂಬಸ್ಥರು ಜಮೀನಿಗೆ ಹೋದ ಸಂದರ್ಭದಲ್ಲಿ ಕಳ್ಳತನ ಮಾಡಲಾಗಿತ್ತು ಮನೆಯಲ್ಲಿ ಯಾರು ಇಲ್ಲದನ್ನ ನೋಡಿ ಮನೆಗೆ ನುಗ್ಗಿ ಆರೋಪಿ ಕಳ್ಳತನ ಮಾಡಿದ್ದ.ಮನೆಯ ಟ್ರೆಜರಿಯಲ್ಲಿ ಇರಿಸಿದ್ದ 58 ಗ್ರಾಂ ಚಿನ್ನಾಭರಣಗಳು ಹಾಗೂ 48 ಸಾವಿರ ನಗದನ್ನು ಕಳ್ಳತನ ಮಾಡಿ ಖದೀಮ ಪರಾರಿಯಾಗಿದ್ದ ಮಹಾಂತೇಶ ಬೋಗೂರ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು.24 ಗಂಟೆಯಲ್ಲಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಬೈಲಹೊಂಗಲ ಪೊಲೀಸರು ಯಶಸ್ವಿಯಾಗಿದ್ದು ಚಿವಟಗುಂಡಿ ಗ್ರಾಮದ ಪ್ರಕಾಶ ರಾಯಪ್ಪ ಮಲ್ಲೂರ (40) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೈಲಹೊಂಗಲ ಉಪವಿಭಾಗದ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿತ್ತು ಬೈಲಹೊಂಗಲ ಪೊಲೀಸರು ಕೇವಲ 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿ ಆರೋಪಿಯಿಂದ 5.49 ಲಕ್ಷ ಮೌಲ್ಯದ 58 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.ಕಾರ್ಯಾಚರಣೆ ಯಶಸ್ವುಯಾಗಿ ಭೇದಿಸಿದ ಸಿಪಿಐ ಪ್ರಮೋದ್ ಸಿ. ಯಲಿಗಾರ,ಸಿಬ್ಬಂದಿ ತಂಡಕ್ಕೆ ಎಸ್ಪಿ ಕೆ ರಾಮರಾಜನ್ ಶ್ಲಾಘಿಸಿದ್ದಾರೆ.










