ಬೆಳಗಾವಿ

ಜೆಪ್ಟೋ ವಿರುದ್ಧ ನೌಕರರ ಪ್ರತಿಭಟನೆ! ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಬೆಳಗಾವಿ:

ಜೆಪ್ಟೂ ವಿರುದ್ದ ಕಂಪನಿಯ ಉದ್ಯೋಗಿಗಳೇ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಮಂಗಳವಾರ ಪೇಟೆಯಲ್ಲಿರುವ ಜೆಪ್ಟೂ ಕಚೇರಿಯಿಂದ ಸಹೋದ್ಯೋಗಿಗಳು ಹೊರಗುಳಿಯುವ ಮೂಲಕ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದರು.ನೂರಾರು ಸಹೋದ್ಯೋಗಿಗಳು ಕಂಪನಿಯ ವಿರುದ್ಧ ಆಕ್ರೋಶ ಹೊರಹಾಕಿದರು.ಪ್ರತಿ ಕಿಲೋಮೀಟರ್ ಗೆ 13 ರೂಪಾಯಿ ವೇತನ ನೀಡುತ್ತೆವೆ ಎಂದು ಹೇಳಿ ಕೆಲಸಕ್ಕೆ ನೇಮಿಸಿಕೊಂಡು ಈಗ ಪ್ರತಿ ಕೀಮಿಗೆ ಕೇವಲ 8 ರೂಪಾಯಿ ಕೊಡುತ್ತಿದ್ದಾರೆ. ಇದರಿಂದಾಗಿ ನಮಗೆ ಸಂಬಳ ಕಡಿಮೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು ಅಲ್ಲದೇ ಹೇಳದೆ ಕೇಳದೆ ಯಾವುದೇ ಕಾರಣವಿಲ್ಲದೆ ಕಂಪನಿಯಲ್ಲಿರುವ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.ಸಧ್ಯ ಕಂಪನಿಯ ಹೊರಗಡೆ ಕುಳಿತಿರುವ ನೌಕರರು ನಮ್ಮ ಸಮಸ್ಯೆಗಳನ್ನು ಕಂಪನಿಯ ಮ್ಯಾನೇಜರ್ ಬಂದು ಕೇಳಬೇಕು ನಮಗಾಗುತಗ್ತಿರುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡಬೇಕು.ಅಲ್ಲದೆ ಪ್ರತಿ ಕೀಮಿಗೆ 13 ರೂ ಬದಲಿಗೆ 20 ರೂ ಸಂಬಳ ನೀಡಬೇಕು ಈಗಿರುವ 70 ಜನ ನೌಕರರು ಕೆಲಸ ಮಾಡಿಕೊಂಡಿದ್ದು ಹೊಸ ನೇಮಕಾತಿಗಳನ್ನು ಸಧ್ಯಕ್ಕೆ ಮಾಡಿಕೊಳ್ಳಬಾರದು ಎಂದು ನೌಕರರು ಆಗ್ರಹಿಸಿದ್ದಾರೆ.

TV24 News Desk
the authorTV24 News Desk

Leave a Reply