



ಬೆಳಗಾವಿ:
ತನ್ನ ಅಂಗಡಿಯಲ್ಲಿ ತಾನೇ ಕದ್ದು ನನ್ನಂಗಡಿಯಲ್ಲಿದ್ದ ಬಂಗಾರ ಕಳುವಾಗಿದೆ ಹುಡುಕಿಕೊಡಿ ಎಂದು ದೂರು ನೀಡಿದ್ದ ಭೂಪನನ್ನೇ ಪೊಲೀಸರು ಬಂಧಿಸಿದ್ದಾರೆ.ಇಂತಹ ವಿಚಿತ್ರ ಘಟನೆಗೆ ಕುಂದಾನಗರಿ ಬೆಳಗಾವಿ ಸಾಕ್ಷಿಯಾಗಿದೆ.ಬೆಳಗಾವಿಯ ರಾಮದೇವ ಗಲ್ಲಿಯಲ್ಲಿರುವ ಬಂಗಾರದ ಅಂಗಡಿಗೆ ಇದೇ ಜು. 16 ರಂದು ಖದೀಮರು ಕನ್ನ ಹಾಕಿದ್ದಾರೆ ಎಂದು ಅದೇ ಅಂಗಡಿ ಮಾಲೀಕ ಕೃಷ್ಣಾನಂದ ವರ್ಣಿಕರ್ ದೂರು ನೀಡಿದ್ದರು.
ವಿ ಪಿ ವರ್ಣಿಕರ್ ಆಂಡ್ ಸನ್ಸ್ ಜುವೇಲರಿ ಅಂಗಡಿಯಲ್ಲಿ ಕಳ್ಳತನವಾಗಿದೆ ಎಂದು ತನ್ನ ಅಂಗಡಿಯಲ್ಲಿದ್ದ ಸುಮಾರು 65,95000 ರೂ ಮೌಲ್ಯದ ಬಂಗಾರ ಕಳುವಾಗಿದೆ ಎಂದು ಕೃಷ್ಣಾನಂದ ದೂರು ನೀಡಿದ್ದರು.ತನ್ನ ಅಂಗಡಿಯಲ್ಲಿ ತಾನೇ ಕದ್ದು ತಾನೇ ಬಂದು ಖಡೇಬಜಾರ್ ಠಾಣೆಗೆ ದೂರು ನೀಡಿದ್ದ.ದೂರು ಪಡೆದು ಪೊಲೀಸರು ತನಿಖೆಗೆ ಇಳಿದಿದ್ದರು. ಪ್ರಕರಣದ ಕುರಿತು ಸೂಕ್ಷ್ಮ ವಿಚಾರಣೆ ನಡೆಸುವ ವೇಳೆ ಪೊಲೀಸರಿಗೆ ಕೃಷ್ಣಾನಂದ ವರ್ಣಿಕರ್ ಮೇಲೆ ಅನುಮಾನ ಬಂದು ಆತನನ್ನು ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು ತನ್ನ ಅಂಗಡಿಯಲ್ಲಿ ತಾನೇ ಕದ್ದಿದ್ದು ಎಂದು ಕೃಷ್ಣಾನಂದ ಒಪ್ಪಿಕೊಂಡಿದ್ದಾರೆ.ತನ್ನಂಗಡಿಯಲ್ಲಿ ತಾನೇ ಕದಿಯಲು ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿದ್ದು ಸದ್ಯ ಆರೋಪಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









