Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಕೆಪಿಟಿಸಿಎಲ್ ಅಕ್ರಮ ಪರೀಕ್ಷೆ ಕೇಸ್: ಮತ್ತೆ ನಾಲ್ಕು ಆರೋಪಿಗಳು ಅಂದರ 

ಮೂಡಲಗಿ : ಇತ್ತೀಚಿಗೆ  ನಡೆದ ಕೆಪಿಟಿಸಿಎಲ್ ಅಕ್ರಮ ಪರೀಕ್ಷೆ ಕೇಸ್‍ನಲ್ಲಿ ಮತ್ತೆ ನಾಲ್ಕು ಜನ  ಆರೋಪಿಗಳನ್ನು ಗೋಕಾಕ್  ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಬಂಧಿತ ಆರೋಪಿಗಳನ್ನು ಅರಬಾಂವಿಯ ಮಂಜುನಾಥ ರಾಮಪ್ಪ ಮಾಳಿ ಎಂಬುವವನು  ಇಲೆಕ್ಟ್ರಾನಿಕ್ ಡಿವೈಸ್‍ಗಳನ್ನು ಮಾಡಲು ಇನ್ನಿತರ ಆರೋಪಿತರೊಂದಿಗೆ ಸೇರಿ ಹಣ ಕೊಟ್ಟು ಮತ್ತು ಪರೀಕ್ಷೆಗೆ ಕುಳಿತ ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಮೈಕ್ರೋಚಿಪ್ ಕೊಟ್ಟು ಕಳುಸಿರುತ್ತಾನೆ . ಈತನಿಂದ  ಮೊಬೈಲ್ ಹಾಗೂ  ಡಸ್ಟರ್ ಕಾರನ್ನು  ವಶ  ಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೆಪಿಟಿಸಿಎಲ್  ಪರೀಕ್ಷೆಗೆ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದ  ಪುಂಡಲಿಕ ಫಕೀರಪ್ಪ ಬನಾಜ, ಅರಬಾಂವಿಯ ಗುಡ್ಡದ ವಾರಿಯ ಮಾರುತಿ ರಾಮಣ್ಣ ಹೊಲದವರ, ಕಲ್ಲೋಳ್ಳಿ ಗ್ರಾಮದ ಮಹಾದೇವ ಹಣಮಂತ ದಾಸನಾಳ,  ಗೋಕಾಕ್  ಪೊಲೀಸರುಬಂಧಿಸಿದ್ದಾರೆ. ನಾಲ್ಕು ಜನ  ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು. ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
TV24 News Desk
the authorTV24 News Desk

Leave a Reply

error: Content is protected !!