ಬೆಳಗಾವಿ :ಕೊರೊನಾ ಸೋಂಕಿನ ಭಯದಿಂದ ಕಳೆದ ಎರಡು ವರ್ಷಗಳಿಂದ ಜನರು ಪಟಾಕಿಗಳ ಖರೀದಿಗೆ ಹಿಂದೇಟು ಹಾಕಿದ್ದರು. ಮೇಲಾಗಿ ಸರಕಾರಗಳೂ ಕೂಡ ಪಟಾಕಿ ಸಿಡಿಸಲು ತರಹೇವಾರಿ ಷರತ್ತು ಹಾಕಿತ್ತು. ಹೀಗಾಗಿ ಕಳೆದ ವರ್ಷ ಪಟಾಕಿ ಮಾರಾಟಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಆದರೆ, ಈ ಬಾರಿ ಕೊರೊನಾಗೆ ಸಂಬಂಧಿಸಿದ ಬಹುತೇಕ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ.ಹೀಗಾಗಿ ಪಟಾಕಿ ಖರೀದಿಸಲು ಸಾರ್ವಜನಿಕರು ನಾನಾ ಪಟಾಕಿ ಅಂಗಡಿಗಳಿಗೆ ಆಗಮಿಸುತ್ತಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಟಾಕಿಗಳ ಮಾರಾಟ ತಕ್ಕಮಟ್ಟಿಗೆ ಉತ್ತಮವಾಗಿದೆ. ಪಟಾಕಿ ಬೆಲೆಗಳೂ ಕೂಡ ಅಷ್ಟೋಂದು ಹೆಚ್ಚಾಗಿಲ್ಲ. ಜನರು ತರಹೇವಾರಿ ಮಾದರಿಯ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ ಎಂದು ಬೆಳಗಾವಿ ವ್ಯಾಪಾರಸ್ಥರು ಟಿವಿ ೨೪ ಪ್ರೊ ಸುದ್ದಿವಾನಿಗೆ ತಿಳಿಸಿದ್ದಾರೆ.
ಈ ಮಧ್ಯೆ, ಕಳೆದ ಎರಡು ವರ್ಷಗಳಿಂದ ಆರ್ಥಿಕವಾಗಿಯೂ ಸಾಕಷ್ಟು ಸಂಕಷ್ಟ ಎದುರಿಸಿದ್ದ ನಾನಾ ವ್ಯಾಪಾರಿಗಳು ಈ ಬಾರಿ ಬೆಳಕಿನ ಹಬ್ಬದ ಆಚರಣೆಯನ್ನು ಹಿಂದಿನ ದಿನಗಳಂತೆ ಈಗ ಮುಂದುವರೆಸಿದ್ದಾರೆ. ನಾನಾ ಬಣ್ಣ ಮತ್ತು ಗಾತ್ರದ ಸುರಸುರಬತ್ತಿ, ಚಕ್ರ, ಬತ್ತಿ, ಬಾಣ, ಮದ್ದಿನ ಕುಳ್ಳಿಗಳು, ಪಟಾಕಿಗಳ ಸರಗಳು, ಆಟಂ ಬಾಂಬ್ ಗಳು ಸೇರಿದಂತೆ ತಮಗಿಷ್ಟವಾದ ಸಿಡಿಮದ್ದುಗಳನ್ನು ಖರೀದಿಸುತ್ತಿದ್ದಾರೆ. ಈ ಬಾರಿ ದೀಪಾವಳಿ ಈ ಹಿಂದಿನಂತೆ ಕಳೆಗಟ್ಟಿದೆಒಟ್ಟಾರೆ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದೀಪಾವಳಿ ಸಂಭ್ರಮ ಮಾತ್ರ ಜೋರಾಗಿದ್ದು, ಬಸವ ನಾಡಿನ ಜತೆ ಸಂತಸದಿಂದ ಹೊರ ಆರ್ಥಿಕ ವರ್ಷವನ್ನು ಭರ್ಜರಿಯಾಗಿಯೇ ಸ್ವಾಗತಿಸುತ್ತಿದ್ದಾರೆ.








