Uncategorized

ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ ಕೃಷ್ಣಾ ನದಿ ಒಳಹರಿವು ತೀರದಲ್ಲಿ 26 ಬೋಟ್ ವ್ಯವಸ್ಥೆ!

ಬೆಳಗಾವಿ ಬ್ರೇಕಿಂಗ್

ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ
ಕೃಷ್ಣಾ ನದಿಗೆ ಅಪಾರ ಪ್ರಮಾಣದ ಒಳಹರಿವು ಹೆಚ್ಚಾಗಿದೆ.
ಒಳಹರಿವು ಹೆಚ್ಚಾಗುತ್ತಿದ್ದಂತೆ ಬೆಳಗಾವಿ ಜಿಲ್ಲಾಡಳಿತ ಎಚ್ಚೆತಕೊಂಡಿದ್ದು ಮುಂಜಾಗೃತಾ ಕ್ರಮವಾಗಿ ಚಿಕ್ಕೋಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ.ಪ್ರವಾಹದ ಮುನ್ಸೂಚನೆ ಇದ್ದು ಪ್ರವಾಹ ಎದರುಸುವಲ್ಲಿ ಅಧಿಕಾರಿಗಳು ಸನ್ನಧರಾಗುವಂತೆ ಚಿಕ್ಕೋಡಿ ಎಸಿ ಸುಭಾಷ್ ಸಂಪಗಾಂವಿ ಸೂಚನೆ ನೀಡಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳಿಗೆ ಚಿಕ್ಕೋಡಿ ಎಸಿ ಸುಭಾಷ್ ಸಂಪಗಾಂವಿ ಮಾತನಾಡಿ ಸದ್ಯ ಕೃಷ್ಣಾ ನದಿ 98 ಸಾವಿರ ಕ್ಯೂಸೇಕ್ ನಷ್ಟು ನೀರು ಬರುತ್ತಿದೆ ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿದೆ ಹೀಗಾಗಿ ನೀರು ಹೆಚ್ಚಾಗುವ ಸಂಭವವಿದೆ. ಜನರಿಗೆ ನದಿ ತೀರಕ್ಕೆ ತೆರಳದಂತೆ ಈಗಾಗಲೇ ಎಚ್ಚರಿಕೆ ನೀಡಿದ್ದೆವೆ. ಚಿಕ್ಕೋಡಿ ಅಥಣಿ ತಾಲೂಕಿನ ಗ್ರಾಮಗಳಲ್ಲಿ 26 ಬೋಟ್ ನಿಯೋಜಿಸಿದ್ದೆವೆ. ನದಿ ಪಾತ್ರದ ಜನರಿಗೆ ರೇಷನ್ ಕೊಡುವ ವ್ಯವಸ್ಥೆ ಮಾಡಿದ್ದೆವೆ.
ಜೋಳ ಅಕ್ಕಿ ಕೊಡುವ ವ್ಯವಸ್ಥೆ ಮಾಡಿದ್ದೆವೆ. ಪರಿಹಾರ ಕೇಂದ್ರ ತೆಗೆಯಲು ಈಗಾಗಲೇ ತಯಾರಿ ಮಾಡಿದ್ದೆವೆ.ದನಕರುಗಳಿಗೆ ನೀರಿನ ಹಾಗೂ ಮೇವಿನ ವ್ಯವಸ್ಥೆ ಮಾಡಿಕೊಂಡಿದ್ದೆವೆ.
ವೈದ್ಯಾಧಿಕಾರಿಗಳಿಗೆ ಚಿಕಿತ್ಸಾ ಕೇಂದ್ರ ತೆರೆಯಲು ಸೂಚನೆ ನೀಡಿದ್ದೆವೆ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಅವರ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದ್ದೆವೆ.
ಯಾವುದೇ ಪರಿಸ್ಥಿತಿ ಎದುರಿಸಲು ಚಿಕ್ಕೋಡಿ ಉಪವಿಭಾಗ ತಯಾರಿಲ್ಲಿದೆ ಎಂದು ಸಂಪಗಾಂವಿ ತಿಳಿಸಿದ್ದಾರೆ.

ಚಿಕ್ಕೋಡಿಯಲ್ಲಿ ಅಧಿಕಾರಿಗಳ ಸಭೆ

ನದಿ ತೀರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಎಸಿ ಸುಭಾಷ್ ಸಂಪಗಾಂವಿ

TV24 News Desk
the authorTV24 News Desk

Leave a Reply