Uncategorized

ಚರಂಡಿ ನೀರಿನ ವಿಚಾರಕ್ಕೆ ಹರಿಯಿತು ನೆತ್ತರ!ಪಿಕಾಶಿಯಿಂದ ಹೊಡೆದು ವ್ಯಕ್ತಿ ಕೊಲೆ!

ಕೊಲೆಯಾದ ಅಮೀರ್
ಆರೋಪಿ ಅಶೋಕ್

ಬೆಳಗಾವಿ:

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಗ್ರಾಮದಲ್ಲಿ ಮನೆಯ ಹಿಂಭಾಗದ ಚರಂಡಿ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಡೆದಿದೆ.

ಜಗಳದಲ್ಲಿ ಓರ್ವ ವ್ಯಕ್ತಿಯ ಕೊಲೆ ನಡೆದಿದ್ದು ಮೃತನನ್ನು ಅಮೀರ್ ಹುಸೇನ್ ಪಾಶ್ಚಾಪುರ್ (48) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಅಶೋಕ್ ರಾಮಾ ಉಗುರುಕೋಡ್ ಕೊಲೆ ಮಾಡಿದ ಆರೋಪಿ (28) ಎಂದು ಗುರುತಿಸಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ನಂದಗಡ ಪೊಲೀಸರು ಘಟನೆ ನಡೆದ ಕೇವಲ ಒಂದು ಗಂಟೆಯೊಳಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮನೆಯ ಹಿಂಭಾಗದ ಚರಂಡಿ ವಿಚಾರವಾಗಿ ಅಮೀರ್ ಹಾಗೂ ಅಶೋಕ್ ಮದ್ಯೆ ಜಗಳ ಶುರುವಾಗಿತ್ತು ಎನ್ನಲಾಗಿದೆ. ಇದೆ ವಿಚಾರವಾಗಿ ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಭಿನ್ನಾಭಿಪ್ರಾಯವೂ ಸಹ ಇತ್ತು ಎನ್ನಲಾಗಿದೆ.ಕಳೆದ ಮಂಗಳವಾರ ಬೆಳಿಗ್ಗೆ ಇದೇ ವಿಷಯಕ್ಕೆ ಸಂಬಂಧಿಸಿ ಜಗಳ ಶುರುವಾಗಿ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಜಗಳದ ವೇಳೆ ಆರೋಪಿ ಕೆಲಸಕ್ಕೆ ಬಳಸುವ ಪಿಕಾಶಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಅಮೀರ್ ಹುಸೇನ್ ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸ್ಥಳ ಮಹಜರು ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಮುಖ ಆರೋಪಿಯಾದ ಅಶೋಕ ಉಗರಕೋಡ ಅವನ ತಾಯಿ ರೇಣುಕಾ ಉಗರಕೋಡ ಹಾಗೂ ಅಕ್ಕ ಅಶ್ವಿನಿ ಎಂಬುವವರ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನ ವಶಕ್ಕೆ ಪಡೆದಿರುವ ನಂದಗಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

TV24 News Desk
the authorTV24 News Desk

Leave a Reply