ಬೆಳಗಾವಿ ಬ್ರೇಕಿಂಗ್
ಕಾಲು ಜಾರಿ ಬಾವಿಗೆ ಬಿದ್ದಿದ್ದ ಯುವಕನನ್ನು ಅಗ್ನಿಶಾಮಕ ದಳದ ಸಿಬ್ಬಂಧಿ ರಕ್ಷಣೆ ಮಾಡಿದ್ದಾರೆ. ರಸ್ತೆ ಪಕ್ಕದಲ್ಲಿ ಬಾವಿಯಲ್ಲಿ ಕಾಲು ಜಾರಿ ಯುವಕ ಬಿದ್ದಿದ್ದ ಯುವಕ ಮದ್ಯದಮಲಿನಲ್ಲಿದ್ದ ಎನ್ನಲಾಗಿದೆ.ಸುಮಾರು 80 ಅಡಿ ಆಳದ ಬಾವಿಗೆ ಯುವಕ ಬಿದ್ದಿ ಘಟನೆಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಮಧ್ಯ ರಾತ್ರಿ ನಡೆದಿತ್ತು. ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಅಗ್ನಿಧಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.ಬಾವಿಗೆ ಬಿದ್ದಿದ್ದ ಯುವಕನನ್ನು ಶ್ರೀಧರ ಮರ್ಯಾಯಿ(24)ಎಂದು ಗುರುತಿಸಲಾಗಿದೆ.ಅಗ್ನಿಶಾಮಕ ದಳದ ಸಿಬ್ಬಂಧಿ ಸತತ 3 ಘಂಟೆ ಕಾಲ ಕಾರ್ಯಾಚರಣೆ ನಡಸಿ ಯುವಕನ ರಕ್ಷಣೆ ಮಾಡಿದ್ದಾರೆ.ಚಿಕ್ಕೋಡಿಯ ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚಣೆ ನಡೆಸಿ ಯುವಕನನ್ನು ಹೊರತೆಗೆದು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು
ಯುವಕನಿಗೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಘಟನೆಯು ಚಿಕ್ಕೋಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.











