Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

 ಅರಣ್ಯಇಲಾಖೆಯ ಯಶಸ್ವಿ ಕಾರ್ಯಾಚರಣೆ ಬೃಹತ್ ಮೊಸಳೆ ರಕ್ಷಣೆ 

ಹುಕ್ಕೇರಿ: ತಾಲೂಕಿನ ಬಡಕುಂದ್ರಿ ಗ್ರಾಮದ ಬಳಿಯ ನೀರಿನ ಟ್ಯಾಂಕ್ ನಲ್ಲಿ ಬಿದ್ದಿದ್ದ ಬೃಹತ್ ಗಾತ್ರದ ಮೊಸಳೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಬಡಕುಂದ್ರಿ ಗ್ರಾಮದ ಹಿರಣ್ಯಕೇಶಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಹಿನ್ನಲೆ ಗ್ರಾಮದ ಬಳಿ ಈ ಮೋಸಳೆ ಬಂದಿರಬಹುದು ಎನ್ನಲಾಗುತ್ತಿದೆ. ಬಡಕುಂದ್ರಿ ಗ್ರಾಮದ ಬಳಿಯ ನೀರಿನ ಟ್ಯಾಂಕ್ ನಲ್ಲಿ ಬಿದ್ದಿದ್ದ ಮೊಸಳೆಯನ್ನು ಜೆಸಿಬಿ ಯಂತ್ರದ ಮೂಲಕ ಸೇರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬೀಡಲಾಗಿದೆ.
ಬೆಳಗಾವಿ ಡಿಸಿಎಪ್ ಹರ್ಷಭಾನು ಮಾರ್ಗದರ್ಶದಲ್ಲಿ ಹುಕ್ಕೇರಿ ವಲಯ ಅರಣ್ಯಾಧಿಕಾರಿ  ಪ್ರಸನ್ನ ಬೆಲ್ಲದ, ಉಪ ಅರಣ್ಯಾಧಿಕಾರಿ ವಿಷ್ಣುಕುಮಾರ ನಾಯಿಕ ಹಾಗೂ ಸಿಬ್ಬಂದಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!