ಬೆಳಗಾವಿ

ಬಂಗಾರ ಅಂಗಡಿಯಲ್ಲಿ ಕಳ್ಳತನ 

ಘಟಪ್ರಭಾ : ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎರಡು ಬಂಗಾರದ ಅಂಗಡಿಗಳಲ್ಲಿ ಕಳ್ಳತನವಾದ  ಘಟನೆ ರವಿವಾರ ನಡೆದಿದೆ.
ಪಟ್ಟಣದ ಕರೋಶಿ ಕಾಂಪ್ಲೆಕ್ಸ್’ನಲ್ಲಿ ಇರುವ ಒಂದು ಅಂಗಡಿ ಮತ್ತು ಅದರ ಕೂಗಳತೆ ದೂರದಲ್ಲಿರುವ ಇನ್ನೊಂದು ಬಂಗಾರದ ಅಂಗಡಿಗಳ ಶೇಟರ್ ಮೇಟಿ ತೆಗೆದು ಕಳ್ಳತನ ಮಾಡಿದ್ದಾರೆ.
ಮೊದಲನೇ ಅಂಗಡಿಯಲ್ಲಿ ಏನು ಸಿಗದ ಕಾರಣ ಕೂಗಳತೆ ದೂರದಲ್ಲಿರುವ ಕರೋಶಿ ಕಾಂಪ್ಲೆಕ್ಸ್’ನಲ್ಲಿರುವ ಬಂಗಾರದ ಅಂಗಡಿಯಿಂದ ಸುಮಾರು 15 ಕೆಜಿ ಬೆಳ್ಳಿ ಮತ್ತು 200 ಗ್ರಾಂ. ಬಂಗಾರದ ಆಭರಣ ಸೇರಿದಂತೆ ಅಂದಾಜು ಇಪ್ಪತ್ತು ಲಕ್ಷಕ್ಕಿಂತ  ಹೆಚ್ಚಿನ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ‌.
ಕಳ್ಳತನದ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು, 7-8 ಜನ ಮುಸುಕುಧಾರಿ ಕಳ್ಳರು ಚಾಣಾಕ್ಷತನದಿಂದ ಕೆಲಸ ಮುಗಿಸಿರುವುದು ಸಿಸಿ ಟಿವಿಯಲ್ಲಿ ಕಂಡು ಬರುತ್ತಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಘಟಪ್ರಭಾ ಪೊಲೀಸ್ ಠಾಣೆಯ ಪಿಐ ಶ್ರೀಶೈಲ ಬ್ಯಾಕೋಡ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ‌‌. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಡಾಗ್ ಸ್ಕೋಡ್ ಆಗಮಿಸಿ ಕಳ್ಳರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ.
TV24 News Desk
the authorTV24 News Desk

Leave a Reply