


ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸಂಪರ್ಕದ ಕೊಂಡಿಯಾಗಿದ್ದ ಕುಡಚಿ ಸೇತುವೆ ಸದ್ಯ ಸಂಚಾರಕ್ಕೆ ಮುಕ್ತವಾಗಿದೆ.
ಕಳೆದ ಎರಡು ದಿನಗಳಿಂದ ಮುಳುಗಡೆಯಾಗಿದ್ದ ಕೃಷ್ಣಾ ನದಿ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಸೇತುವೆ ಮುಳುಗಡೆಯಾಗಿತ್ತು.ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಲ್ಲಿರುವ ಬೃಹತ್ ಸೇತುವೆ ಇದಾಗಿದ್ದು ಕುಡಚಿ ಮೂಲಕ ಉಗಾರ್ ಖುರ್ದ್ ಬಳಿಸಿಕೊಂಡು ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಧ್ಯೆ ಸರಕು ಸಾಗಾಟ ಈ ಸೇತುವೆಯ ಮೂಲಕವೇ ನಡೆಯುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಬೃಹತ್ ಸೇತುವೆಯ ಮೇಲೆ ಕೃಷ್ಣಾ ನದಿ ನೀರು ಆವರಿಸಿ ಸೇತುವೆ ಮುಳುಗಡೆಯಾಗಿದ್ದರಿಂದ ಸೇತುವೆ ಸಂಚಾರ ಬಂದ್ ಆಗಿತ್ತು.
ಆದರೆ ಇಂದು ಸೇತುವೆಯ ಮೇಲಿನ ನೀರು ಇಳಿಮುಖವಾಗಿದ್ದು ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬಂದು ಸೇತುವೆಯ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಸೇತುವೆಯನ್ನು ಪೊಲೀಸರು ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ.









