Uncategorized

ಎಲ್ಲಾ ಜಿಲ್ಲಾಧಿಕಾರಿಗಳಿಂದ ಮಳೆ ವರದಿ ಕೇಳಿದ ಸಿಎಂ ಶೀಘ್ರದಲ್ಲಿಯೇ ಮೋಡ ಬಿತ್ತನೆ?

ಬೆಳಗಾವಿ:

ಉತ್ತರ ಕರ್ನಾಟಕದಾದ್ಯಂತ ತೀವ್ರ ಬರದ ಛಾಯೆ ಆವರಿಸಿದ್ದು ಇದನ್ನು ನೀಗಿಸಲು ರಾಜ್ಯ ಸರ್ಕಾರವೇ ಮೋಡ ಬೀತ್ತನೆಗೆ ಮುಂದಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.ಈ ಕುರಿತು ಕಿತ್ತೂರು ಕರ್ನಾಟಕ ಏಳು ಜಿಲ್ಲೆ ಶಾಸಕರು, ಅಧಿಕಾರಿಗಳ ಜೊತೆಗೆ ಸಿಎಂ ಮಹತ್ವದ ಸಭೆ ನಡೆಸಿದ್ದು ಸಭೆಯಲ್ಲಿ ಕರ್ನಾಟಕ-ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಮಳೆಯಾಗಿರುವುದನ್ನು ಸಿಎಂ ಡಿಕೆ ಶಿವಕುಮಾರ ಮನಗಂಡಿದ್ದಾರೆ.ಉಳಿದ ಜಿಲ್ಲೆಯಲ್ಲಿ ಬಹುತೇಕ ಕಡೆಗೆ ಮಳೆರಾಯ ಕೈ ಕೊಟ್ಟಿದ್ದಾನೆ.
ಮೇ ಅಂತ್ಯದಿಂದ ಹಿಡಿದು ಜುಲೈ ಎರಡನೇ ವಾರವಾದ್ರು ವಾಡಿಕೆಯಂತೆ ಮಳೆ ಆಗಿಲ್ಲ.ಸದ್ಯ ಪಶ್ಚಿಮ ಘಟ್ಟಗಳಲ್ಲಿ ಆಗಿರೋ ಮಳೆಯಿಂದ ಕೊಂಚ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ.ಬಹುಪಾಲು ಶಾಸಕರು ಹಾವೇರಿಯಂತೆ ಮೋಡ ಬಿತ್ತನೆ ಮಾಡಲು ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.ಸರ್ಕಾರವೇ ರೈತರ ಹಿತ ಕಾಪಾಡಲು ಮೋಡ ಬಿತ್ತನೆ ಗೆ ಶಾಸಕರು ಒತ್ತಾಯಿಸಿದ್ದು ಸರ್ಕಾರಕ್ಕೆ ಸಮಗ್ರ ವರದಿ ನೀಡುವಂತೆ ಆಯಾ ಜಿಲ್ಲಾಡಳಿತಕ್ಕೆ ಸಿಎಂ ಸೂಚನೆ ನೀಡಿದ್ದಾರೆ.ಆ ವರದಿ ಅವಲೋಕಿಸಿ ನಂತರ ಮೋಡ ಬಿತ್ತನೆಯ ತೀರ್ಮಾನಕ್ಕೆ ಸರ್ಕಾರ ಬರಲಿದೆ ಎನ್ನಲಾಗಿದೆ.

TV24 News Desk
the authorTV24 News Desk

Leave a Reply