Uncategorized

ಸಂಪುಟ ವಿಸ್ತರಣೆ ಕುರಿತು ಸಿಎಂ ಡಿಕೆಶಿ ಏನಂದ್ರು!

ಬೆಳಗಾವಿ:

ರಾಜ್ಯ ಸಂಪುಟ ವಿಸ್ತರಣೆ ವಿಚಾರವಾಗಿ ಬೆಳಗಾವಿಯಲ್ಲಿ ಸಿಎಂ ಡಿ ಕೆ ಶಿವಕುಮಾರ ಪ್ರತಿಕ್ರಿಯೇ ನೀಡಿ ರಾಜ್ಯದಲ್ಲಿ ಸಂಪುಟ ವಿಸ್ತರಣೆಗೆ ಒತ್ತಡ ಏನು ಇಲ್ಲ ನಮ್ಮ ನಾಯಕರು ಇವತ್ತು, ಇಲ್ಲವೇ ನಾಳೆ ಬರ್ತಾರೆ. ಯಾವತ್ತು ಕರೆಯುತ್ತಾರೆ ಅವತ್ತು ಹೋಗಿ ಚರ್ಚೆ ಮಾಡ್ತಿ‌ನಿ ಎಂದರು.ಇನ್ನು ಬೆಳಗಾವಿಯಲ್ಲಿ ಆರ್ ಎಸ್ ಎಸ್ ಸಭೆ ವಿಚಾರಕ್ಕೆ ನನಗೆ ಮಾಹಿತಿ ಬಂದಿಲ್ಲ, ವರದಿ ಕೇಳಿದ್ದೇನೆ.ಕಾನೂನಿನಲ್ಲಿ ಯಾರಿಗೆ ಏನೆಲ್ಲ ಅವಕಾಶ ಇದೆ ನೋಡೋಣ ಎಂದ ಅವರು ಕಾನೂನು ಅವಕಾಶ ಇಲ್ಲ ಅಂದ್ರೆ ಅನುಮತಿ ಸಿಗಲ್ಲ.ಒಬ್ಬರಿಗೆ ಒಂದೊಂದು ಮಾಡೋದು ಆಗಲ್ಲ ಎಂದರು.ಇನ್ನು ರಾಜ್ಯದಲ್ಲಿ ಮೋಡ ಬಿತ್ತನೆ ಬಗ್ಗೆ ಡಿಮ್ಯಾಂಡ್ ಇದೆ ಲಿಗಲ್, ಫೈನಾನ್ಸ್ ಸಲಹೆಗಾರ ಜೊತೆಗೆ ಮಾತನಾಡಬೇಕು ಶಾಸಕರು ಎಲ್ಲಾ ಬಹಳ ಒತ್ತಡ ಮಾಡುತ್ತಿದ್ದಾರೆ.ಮೋಡ ಬಿತ್ತನೆ ಬಗ್ಗೆ ಪರಿಶೀಲನೆ ಮಾಡ್ತಿನಿ ಎಂದು ಡಿಕೆಶಿ ಹೇಳಿದರು.

ಇನ್ನು ಬೆಂಗಳೂರು ಸಿಟಿ ರೌಂಡ್ಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ
ನಾನು ಬೆಂಗಳೂರು ಸಚಿವಾಗಿದ್ದಾಗ ಸರ್ವ ಪಕ್ಷಗಳ ಶಾಸಕರ ಸಭೆ ಮಾಡಿದ್ದೆ ಟ್ರಾಫಿಕ್ ಕಿರಿಕಿರಿ ಆಗುವ ಪ್ರದೇಶದ ಬೀದಿ ಬದಿ ವ್ಯಾಪಾರ ತೆರವು ಮಾಡಬೇಕು ಎಂದು ಆದೇಶಿಸಿದ್ದೆ.
ಬೆಂಗಳೂರಿನ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಒಗ್ಗಟ್ಟಿನ ಆಗ್ರಹ ಮಾಡಿದ್ದರು ಆ ಪ್ರಕಾರ ಈಗ ಕೆಲಸ ನಡೆಯುತ್ತಿದೆ, ಸೈಡ್‌ನಲ್ಲಿ ಅಂಗಡಿ ಹಾಕುವಂತೆ ಹೇಳಿದ್ದೇನೆ 60 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸರ್ವೆ ಮಾಡಿಸಿದ್ದೇವೆ. ತಳ್ಳುವ ಗಾಡಿಗಾಗಿ 30 ಸಾವಿರ ಫಲಾನುಭವಿಗಳು ಅರ್ಜಿ ಹಾಕಿದ್ದಾರೆ.ನಿಗದಿ ಮಾಡಿದ ಸ್ಥಳದಲ್ಲಿ ವ್ಯಾಪಾರ, ವಹಿವಾಟು ಮಾಡಬೇಕು ನಾವು ಯಾರ ಹೊಟ್ಟೆಯ ಮೇಲೆ ಹೊಡೆಯಲ್ಲ ಈ ಎಲ್ಲದರ ಬಗ್ಗೆ ಕೃಷ್ಣ ಭೈರೆಗೌಡರು ತೀರ್ಮಾನ ತೆಗೆದುಕೊಳ್ಳುತ್ತಾರೆ.ಮೇನ್ ರೋಡ್ ಮೇಲೆ ಕವರ್ ಹಾಕಿಕೊಂಡು ವ್ಯಾಪಾರ ಮಾಡಲು ಅವಕಾಶ ನೀಡಲ್ಲ.
ಸುಪ್ರೀಂ ಕೋರ್ಟ್ ಗೈಡ್‌ಲೈನ್ಸ್ ಕೂಡ ನಾವು ಪಾಲಿಸಬೇಕು, ಜನರ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕಿದೆ.ಮುಂದೆ ಕಠಿಣ ತೀರ್ಮಾನ ‌ಮಾಡಬೇಕಾಗುತ್ತದೆ
ಕೃಷ್ಣಭೈರಗೌಡರ ಒಬ್ಬರ ಮೇಲೆ ನಾವು ಬಿಡಲ್ಲ ಬೆಂಗಳೂರು ಶಾಸಕರು, ಪೋಲೀಸರ ಅಭಿಪ್ರಾಯ ಕೇಳಿ ತೀರ್ಮಾನ ಕೈಗೊಂಡಿದ್ದೇವೆ.ರಸ್ತೆ ಸ್ಥಳಾವಕಾಶ ಕೊಡ್ತಿವಿ, ಬೆಳಗ್ಗೆಯಿಂದ ಸಂಜೆವರೆಗೆ ವ್ಯಾಪಾರ ಮಾಡಿ ಹೋಗಬೇಕು ಅಲ್ಲೇ ಟೆಂಟ್ ಹಾಕಿಕೊಂಡು ಕೂಡಲು ಅವಕಾಶ ನೀಡಲ್ಲ ನಾಗರಿಕರ ಬದುಕು, ಜನರ ಆಸ್ತಿ ಮುಂದೆ ಅಂಗಡಿ ಹಾಕುವಹಾಗಿಲ್ಲ ಎಂದರು.
ಇನ್ನು ಜಿಬಿಎ ಚುನಾವಣೆಗೆ ನಡೆಸಲು ಸಮಯಾವಕಾಶ ಕೋರಿ ಸುಪ್ರೀಂಕೋರ್ಟ್ ಅರ್ಜಿ ವಿಚಾರಕ್ಕೆ ಸುಪ್ರೀಂ ಕೋರ್ಟ್ ಸಮಯಾವಕಾಶ ಕೊಡಲ್ಲ ಎಂದಿದೆ.ಆದರೆ ವಾಸ್ತವದಲ್ಲಿ ಸ್ವಲ್ಪ ಸಮಸ್ಯೆ ಇದೆ ಅಧಿಕಾರಿಗಳಿಗೆ ನಾನು ಬಿಟ್ಟು ಬಿಟ್ಟಿದ್ದೇನೆ, ನಾನು ಮಧ್ಯ ಪ್ರವೇಶ ಮಾಡಲ್ಲ ಆದರೆ ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಿಕೆ ಶಿವಕುಮಾರ ಹೇಳಿದರು.

TV24 News Desk
the authorTV24 News Desk

Leave a Reply