

ಬೆಳಗಾವಿ:
ಬೆಳಗಾವಿ ಜಿಲ್ಲೆ 3 ಸಚಿವ ಸ್ಥಾನ ಕೇಳಿದ್ದೇವೆ ಎಂದು ಬೆಳಗಾವಿಯಲ್ಲಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ಹೇಳಿದ್ದಾರೆ.ಇಂದು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಪದೇ ಪದೇ ಚಿಕ್ಕಮಕ್ಕಳಂತೆ ಮಂತ್ರಿ ಮಾಡುವಂತೆ ಕೇಳುವುದಿಲ್ಲ.ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಹಿಂದೆ ಬೀಳಲ್ಲಾ ನಮಗೂ ಗೌರವವಿದೆ, ಸ್ವಾಭಿಮಾನವಿದೆ ಎಂದಿದ್ದಾರೆ.ಸಚಿವ ಸ್ಥಾನಕ್ಕಿಂತಲೂ ಸ್ವಾಭಿಮಾನ ದೊಡ್ಡದಾಗಿರುತ್ತೇ ಸಿಎಂ ಅವರಿಗೆ ಗೊತ್ತಿದೆ ನಾವು ಎಷ್ಟು ಕೆಲಸ ಮಾಡಿದ್ದೇವೆ, ನಿಷ್ಠಾವಂತರು ಅಂತಾ ಗೊತ್ತಿದೆ.
ಸಂದರ್ಭಕ್ಕೆ ಅನುಸಾರವಾಗಿ ಮಂತ್ರಿ ಮಂಡಲ ರಚಣೆ ಮಾಡ್ತಾರೆ.ನನ್ನ ರಾಜಕೀಯ ನಿವೃತ್ತಿ ಎಲ್ಲವೂ ಊಹಾಪೋಹಗಳು ನಾನು ಮುಂದಿನ ಚುನಾವಣೆಗೆ ಸಿದ್ಧವಾಗ್ತಿದ್ದೇನೆ.ಈ ಬಾರಿ 12 ಸಾವಿರ ಲೀಡ್ ಇದ್ದವೀ,ಮುಂದಿನ ಬಾರಿ 25 ಸಾವಿರ ಲೀಡ್ ನಲ್ಲಿ ಗೆಲ್ಲುತ್ತಿನಿ.ರಾಜಕೀಯದಲ್ಲಿ ಎಲ್ಲರೂ ಕೊನೆ ಚುನಾವಣೆ ಅಂತ ಹೇಳ್ತಾರೆ ಆದ್ರೆ ಸಾಯುವ ವರೆಗೂ ನಾವೇ ಇರಬೇಕು ಅಂತಾರೆ.
ನಾನು ಏನೇ ಇದ್ದರೂ ನೇರವಾಗಿ ಹೇಳ್ತಿನಿ ನಾನು ನನ್ನ ಲಾಸ್ಟ್ ಚುನಾವಣೆ ಅಂತಾ ಹೇಳಿಯೇ ಇಲ್ಲ.ಇದು ನನ್ನ ಕೊನೆ ಚುನಾವಣೆ ಅಂತಾ ವಿರೋಧಿಗಳು ಅಪ್ರಚಾರ ಮಾಡ್ತಿದ್ದಾರೆ.ನಾನು ವೀಕ್ ಅಂತಾ ಆಗುವುದಿಲ್ಲ, ಸುಳ್ಳು ಸುದ್ದಿ ಹಬ್ಬಿಸಿ,ಅಪ್ರಚಾರ ಮಾಡಿ ನನ್ನ ಇಮೇಜ್ ಡೌನ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ತಮ್ಮ ವಿರೋಧಿಗಳ ವಿರುದ್ಧ ಪಟ್ಟಣ್ ಗುಡುಗಿದ ಅವರು ನನ್ನ ಉಸಿರು ಇರೋ ವರೆಗೂ ರಾಜಕಾರಣ ಮಾಡ್ತಿನಿ ಎಂದರು.ಮುಂದಿನ ಪೀಳಿಗೆಗೆ ನನ್ನ ತಮ್ಮನ ಮಗ ಅನೀಕೆತ ಇದ್ದಾನೆ ಸಿದ್ದರಾಮಯ್ಯ ಅವರು ಆಗ ಹೇಳಿದ್ರು ನನಗೆ ಮಂತ್ರಿ ಮಾಡೋ ಆಸೆಯಿದೆ
ಆದ್ರೆ ಯೋಗ್ಯತೆ ಇರೋ ಚೀಫ್ ವಿಪ್ ಅಗತ್ಯ ವಿದೆ ಅಂತಾ ಹೇಳ್ತಿದ್ದರು.ಸಮಯ ಬಂದಾಗ ಮಂತ್ರಿ ಮಾಡ್ತಿನಿ ಅಂತಾ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದರು. ಇನ್ನು ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಸಂಬಂಧ ಹಳಿಸಿದೇಯಾ ಪ್ರಶ್ನೆಗೆ ಉತ್ತರಿಸಿದ ಅವರು ನೀವು ಕ್ರಿಯೆಟ್ ಮಾಡ್ತಿದ್ದೀರಿ ಅವರಿಬ್ಬರೂ ಚೆನ್ನಾಗಿಯೇ ಇದ್ದಾರೆ
ನೀವೇ ಕೇಳಿ ಕೇಳಿ ಜಗಳ ಹಚ್ಚಿಸುತ್ತಿರಾ ಅನಿಸುತ್ತೆ ಎಂದರು.
ಅವರವರ ಸಂಬಂಧ ನನಗೆ ಏನು ಗೊತ್ತಿಲ್ಲ ಒಮ್ಮೊಮ್ಮೆ ನನ್ನ ಪಕ್ಕದಲ್ಲಿ ಇದ್ದರೂ ಮಾತನಾಡುವುದಿಲ್ಲ ಕೆಲವೊಮ್ಮೆ ದೇಹ ಇಲ್ಲೇ ಇರುತ್ತೆ ತಲೆ ಎಲ್ಲಿಯೋ ಇರುತ್ತದೆ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ.
ಮನೆಯಲ್ಲಿ ಆರಾಮ ಇದ್ದಾರೆ
ಮುಂದಿನ ಚುನಾವಣೆ ಗೆ ತಯಾರಿ ಮಾಡ್ತಾರೆ ಬೆಳಗಾವಿ ಜಿಲ್ಲೆ ಗೆ 3 ಸಚಿವ ಸ್ಥಾನ ಕೇಳಿದ್ದೇವೆ
ಬಿಜೆಪಿ ಸರ್ಕಾರ ಇದ್ದಾಗ 4 ಮಂತ್ರಿ ಸ್ಥಾನ ಕೊಟ್ಟಿದ್ದರು.ನಾನು ಅಶೋಕ ಪಟ್ಟಣ ಅಂತಾ ಪ್ರಮಾಣ ವಚನ ಸ್ವೀಕರಿಸಿದ ಮೇಲೆಯೇ ಮಂತ್ರಿ ಸ್ಥಾನ ಕನ್ಫರ್ಮ್ ಅನ್ನಕೊಬೇಕು ಎಂದು ಪಟ್ಟಣ ಹೇಳಿಕೆ ನೀಡಿದ್ದಾರೆ.









