ನಿಪ್ಪಾಣಿ : ಮಹಾರಾಷ್ಟ್ರದಿಂದ ಬೆಳಗಾವಿ ಗಡಿಗೆ ಆಗಮಿಸಿದ ಶಿವಸೇನೆ ಪುಂಡರು ಮಹಾರಾಷ್ಟ್ರದ ಸಚಿವರ ವಿರುದ್ಧ ಹಾಗು ಕರ್ನಾಟಕ ಸರಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ಭವ ಠಾಕರೆ ಬಣದ ಶಿವಸೇನೆ ಕಾರ್ಯಕರ್ತರು ಬೆಳಗಾವಿ ಗಡಿಗೆ ಆಗಮಿಸಿ ಹೈ ಡ್ರಾಮಾ ಮಾಡಿದ್ದಾರೆ. ಶಿವಸೇನೆ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಉದ್ಭವ ಠಾಕರೆ ಬಣದ ಕಾರ್ಯಕರ್ತರು ಕೊಲ್ಹಾಪುರದಿಂದ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ ಬಳಿ ಆಗಮಿಸಿ ಮಹಾರಾಷ್ಟ್ರದ ಸಚಿವರ ವಿರುದ್ಧ ಹಾಗೂ ಕರ್ನಾಟಕ ಸರಕಾರದ ವಿರುದ್ಧ ದಿಕ್ಕಾರ ಕೂಗಿ ಬೆಳಗಾವಿ ಗಡಿ ನುಗ್ಗಲು ಯತ್ನಿಸಿದರು. ಬೆಳಗಾವಿಗೆ ತೆರಳುವುದಾಗಿ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಹೋಗದಿದ್ದಕ್ಕೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿ ವಿರುದ್ಧ ಘೋಷಣೆ ಕೂಗಿದರಲ್ಲದೆ,ಮಹಾರಾಷ್ಟ್ರದ ಸಚಿವರಿಗೆ ಅರಿಶಿನ ಬಳೆ ತಂದಿದ್ದರು, ಈ ಸಂದರ್ಭದಲ್ಲಿ ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿ ಕರ್ನಾಟಕ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದರು. ಇದೆ ವೇಳೆ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಾಗಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
tv24plus.in > Blog > ಜಿಲ್ಲೆ > ಬೆಳಗಾವಿ > ಮಹಾರಾಷ್ಟ್ರದ ಸಚಿವರಿಗೆ ಅರಿಶಿನ ಬಳೆ ತಂದ ಶಿವಸೇನೆ ಕಾರ್ಯಕರ್ತರು
the authorTV24 News Desk
All posts byTV24 News Desk
Leave a reply








