ಹುಕ್ಕೇರಿ : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಪ್ರಮೋದ್ ಮುತಾಲಿಕ ಅವರು ಹೇಳಿದ್ದಾರೆ. ‘ನಿನ್ನನ್ನು ಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇವೆ’ ಎಂದು ಅಪರಿಚಿತ ದುಷ್ಕರ್ಮಿಗಳು ಮುತಾಲಿಕ್ ಅವರಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅಶ್ಲೀಲ ಶಬ್ದಗಳಿಂದ ನಿಂದಿಸಿ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ತಮಗೆ ಜೀವ ಬೆದರಿಕೆ ಕರೆ ಬಂದ ಹಿನ್ನೆಲೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಮುತಾಲಿಕ್ ದೂರು ದಾಖಲಿಸಿದ್ದಾರೆ. ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ ಅವರಿಗೆ ಕರೆ ಮಾಡಿದ ದುಷ್ಕರ್ಮಿಗಳು ಮಂಗಳೂರು ಭಾಗದ ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
tv24plus.in > Blog > ಜಿಲ್ಲೆ > ಬೆಳಗಾವಿ > ಪ್ರಮೋದ್ ಮುತಾಲಿಕ್ಗೆ ಜೀವ ಬೆದರಿಕೆ
the authorTV24 News Desk
All posts byTV24 News Desk
Leave a reply








