Uncategorized

ಬೆಳಗಾವಿಯ ಈ ಏರಿಯಾ ನೋ ಫ್ಲೈ ಜೋನ್ ಯಾಕೆ ಗೊತ್ತಾ?

ಬೆಳಗಾವಿ:

ಬೆಳಗಾವಿಯಲ್ಲಿ ಇಂದಿನಿಂದ RSS ರಾಷ್ಟ್ರೀಯ ಬೈಠಕ್ ನಡೆಯುವ ಹಿನ್ನೆಲೆಯಲ್ಲಿ ಬೆಳಗಾವಿಗೆ ಇಂದು RSS ಸರಸಂಘ ಚಾಲಕ ಮೋಹನ್ ಭಾಗವತ್ ಆಗಮಿಸಲಿದ್ದಾರೆ. ಮೋಹನ್ ಭಾಗವತ್ ಅವರ ಸುರಕ್ಷತೆಯ ‌ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಡ್ರೋನ್ ಹಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೇ ಕಾರ್ಯಕ್ರಮ ನಡೆಯುವ ಸ್ಥಳವನ್ನು ರೆಡ್ ಝೋನ್, ನೋ ಪ್ಲೈ ಝೋನ್ ಎಂದು ನಿರ್ಬಂಧಿಸಿದೆ.ಸುಮಾರು ಎರಡು ಕಿಲೋಮೀಟರ್ ಸುತ್ತಲೂ ನೋ ಪ್ಲೈ ಜೋನ್ ಮಾಡಿ ನಿಷೇಧ ಹೊರಡಿಸಲಾಗಿದೆ.ಜುಲೈ 6 ರಿಂದ 14 ರ ವರೆಗೂ ಆರ್ ಎಸ್ ಎಸ್ ಕಾರ್ಯಕ್ರಮಗಾಗಿ ಈ ಆದೇಶ ಹೊರಡಿಸಲಾಗಿದ್ದು 14 ನೇ ತಾರೀಕಿನವರೆಗೂ ಈ ಆದೇಶ ಅನ್ವಯವಾಗಲಿದೆ.ಬೆಳಗಾವಿ ನಗರದ ಫೌಂಡ್ರಿ ಕ್ಲಸ್ಟರ್ ಗೆಸ್ಟ್ ಹೌಸ್, ಸಂತ ಮೀರಾ ಸ್ಕೂಲ್ ಸೇರಿ ಹಲವು ಸ್ಥಳಗಳ ಸುತ್ತಲೂ ಆದೇಶ ಜಾರಿ ಮಾಡಲಾಗಿದ್ದು
ಬೆಳಗಾವಿ ಜಿಲ್ಲಾಧಿಕಾರಿ ‌ಮೊಹಮ್ಮದ್ ರೋಷನ್ ಅವರು ಮುಂಜಾಗೃತಾ ಕ್ರಮ ಹಾಗೂ ಸುರಕ್ಷತೆಯ ಕ್ರಮವಾಗಿ ಈ ಆದೇಶ ಹೊರಡಿಸಿದ್ದಾರೆ.

TV24 News Desk
the authorTV24 News Desk

Leave a Reply