Uncategorized

ಒಂದು ರೂಪಾಯಿಗೆ ಒಂದು T-shirt ಮುಗಿಬಿದ್ದ ಯುವಕರಿಗೆ ಪೊಲೀಸರ ಲಾಠಿಏಟು?

ಬೆಳಗಾವಿ:

ಗ್ರಾಹಕರನ್ನು ಸೆಳೆಯಲು ಬಟ್ಟೆ ಅಂಗಡಿ ಮಾಲೀಕ ಮಾಡಿದ ಐಡಿಯಾದಿಂದ ಗ್ರಾಹಕರೇ ಪೊಲೀಸರ ಲಾಠಿಯಿಂದ ಬಿಸಿ ಬಿಸಿ ಕಜ್ಜಾಯ ತಿಂದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಒಂದು ರೂಪಾಯಿಗೆ ಒಂದು ಟೀಶರ್ಟ್ ಆಫರ್‌ ಇಟ್ಟಿದ್ದರಿಂದ ಯುವಕರು ಟೀ ಶರ್ಟ್ ಖದೀರಿಗೆ ಮುಗಿಬಿದ್ದಿದ್ದಾರೆ.ಯುವಕರ ನೂಕು ನುಗ್ಗಲಿನಿಂದ ಕಡೆಗೆ ಪೊಲೀಸರು ಯುವಕರನ್ನು ಚದುರಿಸಲು ಲಘು ಲಾಟಿ ಪ್ರಹಾರ ನಡೆಸಿದ ಘಟನೆ
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಜವಳಿ ಮಳಿಗೆ ಉದ್ಘಾಟನೆ ವೇಳೆ ನಡೆದಿದೆ.
ಒಂದು ಗಂಟೆಗಳ ಕಾಲ ಲಾಂಚಿಂಗ್ ಆಫರ್ ನೀಡಿದ್ದ ಜವಳಿ ಮಳಿಗೆ ಮಾಲೀಕನಿಂದ ಯುವಕರು ಪೊಲೀಸರ ವದೆ ತಿಂದಿದ್ದಾರೆ.ಒಂದು ರೂಪಾಯಿಗೆ ಒಂದು ಟಿಶರ್ಟ್ ಕೊಡುವುದಾಗಿ ಮಜೆಸ್ಟಿಕ್ ಮಳಿಗೆಯಿಂದ ಆಫರ್ ನೀಡಲಾಗಿತ್ತು ಎನ್ನಲಾಗಿದೆ.
ಆಫರ್ ಕೇಳಿ ಸಹಸ್ರ ಸಂಖ್ಯೆಯಲ್ಲಿ ಮಳಿಗೆ ಮುಂದೆ ಮುಗಿಬಿದ್ದ ಯುವಕರ ದಂಡನ್ನು ನಿಯಂತ್ರಿಸಲು ಸಾಧ್ಯವಾಗದೆ
ಟೀಶರ್ಟ್ ಖರೀದಿಗೆ ನೂಕುನುಗ್ಗಲಾಗಿ ಮಳಿಗೆಯ ಅಲಂಕಾರಿಕ ಗ್ಲಾಸ್ ದ್ವಂಸವಾದ ಘಟನೆಯೂ ನಡೆದಿದೆ. ಯುವಕರನ್ನು ಚದುರಿಸಲು ಲಘು ಲಾಟಿ ಪ್ರಹಾರ ನಡೆಸಿ ಯುವಕರನ್ನು ಹತೋಟಿಗೆ ತರುವಲ್ಲಿ ಮೂಡಲಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

TV24 News Desk
the authorTV24 News Desk

Leave a Reply