ರಾಮದುರ್ಗ: ಪಟ್ಟಣದ ಹೊರವಲಯದಲ್ಲಿರುವ ಅಶೋಕವನದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು ಬೆಳಿಗ್ಗೆ ಶಿವಲಿಂಗಕ್ಕೆ ರುದ್ರಾಭಿಷೇಕ ಬಿಲ್ವಾರ್ಚನೆ ಶಿವನಮೂರ್ತಿ ಹಾಗೂ ಬೃಹತ್ ನಂದಿ ವಿಗ್ರಹಕ್ಕೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು ಇನ್ನು ಶಿವನ ಮೂರ್ತಿಯ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಬೆಳಿಗ್ಗೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದು ಬರುತ್ತಿದೆ ರಾಮದುರ್ಗ ದಲ್ಲಿರುವ ಶಿವನ ಮೂರ್ತಿಯು ದೇಶದಲ್ಲಿಯೇ ವಿಶಾಲವಾದ ಹಾಗೂ ಎತ್ತರವಾದ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ರಾಜ್ಯದಲ್ಲಿಯೇ ಇದು ತೃತೀಯ ಸ್ಥಾನದಲ್ಲಿದೆ ರಾಮದುರ್ಗ ಪಟ್ಟಣದಿಂದ ಸುಮಾರು ಎರಡು ಕಿಲೋಮೀಟರ್ ಸಾಗಿದರೆ ಮುಳ್ಳೂರ ಗುಡ್ಡದಲ್ಲಿ ಶಿವನಮೂರ್ತಿ ಕಾಣಸಿಗುತ್ತದೆ ಈ ಶಿವನಮೂರ್ತಿ ರಾಜ್ಯದಲ್ಲಿಯೇ ಎತ್ತರದ 3ನೇ ಶಿವನಮೂರ್ತಿಯಾಗಿದೆ ಒಟ್ಟು 78 ಅಡಿ ಎತ್ತರವಿರುವ ಶಿವನ ಮೂರ್ತಿ ನೋಡುಗರನ್ನು ಆಕರ್ಷಿಸುವಂತೆ ಕಾಣುತ್ತದೆ ಇನ್ನು ಶಿವನಮೂರ್ತಿ ಎದುರಿಗೆ ಅತಿ ಎತ್ತರದ ನಂದಿ ಮೂರ್ತಿ ಇರುವುದು ವಿಶೇಷ 22 ಅಡಿ ಎತ್ತರ 32 ಅಡಿ ಉದ್ದ ಹಾಗೂ 14 ಅಡಿ ಅಗಲವಿರುವ ಈ ಮೂರ್ತಿ ದೇಶದಲ್ಲಿಯೇ ಅತಿ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಇನ್ನೂ ಇಂದು ಶಿವರಾತ್ರಿಯ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮತ್ತು ಶಿವರಾತ್ರಿ ಜಾಗರಣೆ ಜನಪದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಮಹಾ ಶಿವರಾತ್ರಿಯ ಪ್ರಯುಕ್ತ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅಲ್ಪೋಪಹಾರ ವ್ಯವಸ್ಥೆ ಮಾಡಲಾಗಿದೆ. ಸಂಜೆಯ ವೇಳೆಯಲ್ಲಿ ಕೂಡ ವಿಶೇಷವಾದ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಅಶೋಕ್ ಪಟ್ಟಣ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.
tv24plus.in > Blog > ಜಿಲ್ಲೆ > ಬೆಳಗಾವಿ > ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ
the authorTV24 News Desk
All posts byTV24 News Desk
Leave a reply








