ರಾಜ್ಯ

ಬಿಜೆಪಿ ಪಟ್ಟಿ ಬಿಡುಗಡೆ ಉತ್ತರಕ್ಕೆ ರವಿ ಗ್ರಾಮೀಣಕ್ಕೆ ನಾಗೇಶ 

ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಹೆಸರು ಘೋಷಣೆ

ಬೆಳಗಾವಿ 18 ಕ್ಷೇತ್ರದ ವಿವರ ಇಲ್ಲಿದೆ

ರಾಜ್ಯ ಚುನಾವಣೆ ಇನ್ನೇನು ಕೆಲವು ದಿನಗಳು ಬಾಕಿ ಇದ್ದು, ಕಾಂಗ್ರೆಸ್ ಈಗಾಗಲೇ ಎರಡ ಹಂತದಲ್ಲಿ ಎರಡು ಪಟ್ಟಿಗಳು ಬಿಡುಗಡೆ ಮಾಡಿದ್ದು ಹತ್ತಾರು ಸರ್ಕಸ್ ಮಾಡಿದ ಬಳಿಕ ಕೊನೆಗೂ ಬಿಜೆಪಿ ತನ್ನ

ಮೊದಲ

ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಕೆಲ ಹಾಲಿ ಶಾಸಕರು ಹಾಗೂ ಹಿರಿಯರಿಗೆ ಟಿಕೆಟ್ ಮಿಸ್ ಆಗಿದ್ದು, 52 ಜನ ಹೊಸಬರಿಗೆ ಮಣೆ ಹಾಕಲಾಗಿದೆ. ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿ 35 ಕ್ಷೇತ್ರದ ಟಿಕೆಟ್ ಘೋಷಣೆ ಉಳಿಸಿಕೊಂಡಿದ್ದು ಎರಡನೇ ಹಂತದಲ್ಲಿ 35 ಅಭ್ಯರ್ಥಿಗಯ ಟಿಕೆಟ್ ಘೋಷಣೆ ಆಗಲಿದೆ

ಟಿಕೆಟ್ ಕೈತಪ್ಪುವ ವಿಚಾರ ಗೊತ್ತಾಗುತ್ತಿದಂತೆ ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ರಾಜಿನಾಮೆ ನೀಡಿದ್ದು ಇನ್ನು ಅನೇಕ ಟಿಕೆಟ್ ವಂಚಿತರು ಸಹ ಬಿಜೆಪಿ ಗುಡ್ ಬೈ ಹೇಳುವ ಸಾಧ್ಯತೆ ಇದೆ.‌

ಒಬಿಸಿ 32
ಎಸ್ 30
ಎಸ್ ಟಿ 16
8 ಜನ ಮಹಿಳೆಯರು
ಈ ರೀತಿ ಟಿಕೆಟ್ ಘೋಷಣೆ ಮಾಡಲಾಗಿದೆ. ‌
ವೃತ್ತಿ ಆಧಾರದ ಮೇಲೆ ನೋಡುವುದಾದರೆ
ವಕೀಲರು-5
ವೈದ್ಯರು-9
ಟಿಕೇಟ್ ನೀಡಲಾಗಿದೆ

ಹಾಗಾದರೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಶಿಗ್ಗಾಂಗ- ಬಸವರಾಜ
ಬೆಳಗಾವಿ ಉತ್ತರ-ರವಿ ಪಾಟೀಲ್
ಬೆಳಗಾವಿ ದಕ್ಷಿಣ- ಅಭಯ ಪಾಟೀಲ
ಬೆಳಗಾವಿ ಗ್ರಾಮೀಣ-ನಾಗೇಶ ಮನ್ನೋಳ್ಳಕರ್
ನಿಪ್ಪಾಣಿ- ಶಸಿಕಲಾ
ಅಥಣಿ- ಮಹೇಶ ಕುಮಟಳ್ಳಿ
ಚಿಕ್ಕೋಡಿ-ರಮೇಶ ಕತ್ತಿ
ಹುಕ್ಕೇರಿ-ನಿಖಿಲ ಕತ್ತಿ
ಕಾಗವಾಡ- ಶ್ರೀಮಂತ ಪಾಟೀಲ್
ರಾಯಬಾಗ- ದುರ್ಯೋಧನ ಐಹೋಳೆ
ಕುಡಚಿ- ಪಿ ರಾಜೀವ್
ಯಮಕನಮರಡಿ- ಬಸವರಾಜ ಹುಂದ್ರಿ
ಅರಭಾವಿ- ಬಾಲಚಂದ್ರ ಜಾರಕಿಜೊಳಿ
ಗೋಕಾಕ-ರಮೇಶ ಜಾರಕಿಜೊಳಿ
ರಾಮದುರ್ಗ- ಚಿಕ್ಕರೆವಣ್ಣ
ಸವದತ್ತಿ-ರತ್ನಾ ಮಾಮನಿ
ಕಿತ್ತೂರು- ಮಾಹಾಂತೇಶ ದೊಡ್ಡಗೌಡರ್
ಬೈಲಹೊಂಗಲ- ಜಗದೀಶ ಮೆಟಗುಡ್ಡ
ಖಾನಾಪುರ- ವಿಠಲ ಹಲಗೆಕರ್
ಮುಧೋಳ- ಗೊವಿಂದ ಕಾರಜೋಳ

TV24 News Desk
the authorTV24 News Desk

Leave a Reply