
ಬೆಳಗಾವಿ:
ಮಹಾರಾಷ್ಟ್ರದ ಘಟ್ಟಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ರಾಜ್ಯದತ್ತ ಹರಿದು ಬರುವ ನದಿಗಳಿಗೆ ಜೀವ ಕಳೆ ಬಂದಿದೆ. ಅದರಂತೆ ಘಟಪ್ರಭಾ ನದಿಯೂ ಸಹ ತುಂಬಿ ಹರಿಯುತ್ತಿದೆ. ಸಧ್ಯ ಘಟಪ್ರಭಾ ದಿನಗೆ ಅಡ್ಡಲಾಗಿ ನಿರ್ಮಿಸಿರುವ ಹುಕ್ಕೇರಿ ತಾಲೂಕಿನ ರಾಜಾ ಲಖಮನಗೌಡ ಜಲಾಶಯದಿಂದ ಐದು ಸಾವಿರ ಕ್ಯೂಸೇಕ್ ನೀರು ಹರಿದು ಬಿಡಲಾಗಿದೆ. 51 ಟಿಎಂಸಿ ಸಾಮರ್ಥ್ಯದ ಜಲಾಶಯ ಸಧ್ಯ 42 ಟಿಎಂಸಿ ಭರ್ತಿಯಾಗಿದೆ. ಅಲ್ಲದೆ ಘಟಪ್ರಭಾ ನದಿಗೆ 18 ಸಾವಿರ ಕ್ಯೂಸೇಕ್ ಒಳಹರಿವು ಹೆಚ್ಚಳವಾಗಿದೆ ಈ ಹಿನ್ನೆಲಯಲ್ಲಿ ಜಲಾಶಯದಿಂದ ನೀರು ಹರಿದು ಬಿಡಲಾಗಿದ್ದು ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.