


ಮಹಾರಾಷ್ಟ್ರ:
ನಿರಂತರ ಮಳೆಗೆ ಮುಂಬೈ ಮಹಾನಗರ ತತ್ತರಿಸಿ ಹೋಗಿದೆ. ಅಲ್ಲಿನ ಜನ ಅಕ್ಷರಶಃ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ.ನಿನ್ನೆಯಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮುಂಬೈನ ಭೀವಂಡಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿರುವ ಮಳೆಯಿಂದ ಮಾರುಕಟ್ಟೆ ಗೆ ನೀರು ನುಗ್ಗಿ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಅಂಗಡಿ ವ್ಯಾಪಾರಸ್ಥರು ಕೈ ಕೈ ಹಿಡಿದುಕೊಂಡು ಸೊಂಟದ ಮಟ್ಟದ ನೀರಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣಾವಾಗಿದೆ. ಮುಂಬೈ ಮಹಾನಗರದಾದ್ಯಂತ ಈಗಾಗಲೇ ಜನರಿಗೆ ಎಚ್ಚರಿಕೆ ಇಂದಿರಲು ಅಲ್ಲಿನ ಪಾಲಿಕೆ ಸೂಚಿಸಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರಾತ್ರಿಯಿಡಿ ಜನ ಜಾಗರಣೆ ಮಾಡಿದ್ದಾರೆ. ಒಳಚರಂಡಿಗಳಲ್ಲಿ ಸರಿಯಾಗಿ ನೀರು ಹರಿಯದಿದ್ದರಿಂದ ರಸ್ತೆಯ ಮೇಲೆ ಸೊಂಟದ ಮಟ್ಟದ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ.ಹರಿದಯುವ ನೀರಿನಲ್ಲಿಯೇ ಎಂದಿನಂತೆ ದಿನದ ವ್ಯಾಪಾರ ವಹಿವಾಟು ನಡೆಸುವ ದೃಶ್ಯಗಳೂ ಸಹ ಕಂಡು ಬಂದಿವೆ. ಮುಂಬೈ ಸೇರಿದಂತೆ ಪಶ್ಚಿಮಘಟ್ಟಗಳಲ್ಲಿ ಮಳೆಯ ರೌದ್ರ ನರ್ತನ ಹೆಚ್ಚಾಗಿದ್ದು ಜನ ಆತಂಕದಲ್ಲಿ ದಿನಕಳೆಯುವಂತಾಗಿದೆ.











