Uncategorized

ಗಂಡ್ ಮಗ ಆಗೇತಿ ದೋಸ್ತ ಪಾರ್ಟಿ ಕೊಡ ಅಂತ ಕೇಳಿದ್ದಕ್ಕ ಮರ್ಡರ್ ಅಂತ ನೋಡ್ರಿ?

ಆರೋಪಿ ವಿಶ್ವನಾಥ್
ಕೊಲೆಯಾದ ಹಣಮಂತಪ್ಪ ಇಟಗಿ

ಬೆಳಗಾವಿ:

ಎಂತೆಂಥ ವಿಚಿತ್ರ ಕಾರಣಗಳಿಗೆ ಕೊಲೆಗಳಾಗಿಬಿಡುತ್ತೆ ನೋಡಿ ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ್ದ ಸ್ನೇಹಿನನ್ನೇ ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಲಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ‌ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.
ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ನೆತ್ತರು ಹರಿದು ಸೂತಕದ ಛಾಯೆ ಸದ್ಯ ಊರವನ್ನಾವರಿಸಿದೆ.
ಪಾರ್ಟಿ ಕೊಡಿಸುವ ವಿಚಾರಕ್ಕೆ ಶುರುವಾದ ಮಾತುಕತೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದ್ದು ವಣ್ಣೂರ ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದ್ದು ಕೊಲೆ ಮಾಡಿದ ಆರೋಪಿಯನ್ನು ಆತನ ಗೆಳೆಯ ವಿಶ್ವನಾಥ ಪೂಜೇರಿ ಎಂದು ಗುರುತಿಸಲಾಗಿದೆ‌.
ಆತ್ಮೀಯತೆಯಿಂದ ಗಂಡು ಮಗು ಹುಟ್ಟಿದಕ್ಕೆ ವಿಶ್ವನಾಥ್ ಬಳಿ ಹಣಮಂತಪ್ಪ ಪಾರ್ಟಿ ಕೇಳಿದ್ದ ಎನ್ನಲಾಗಿದೆ.ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯಲ್ಲಿ ಕುಳಿತು ಹರಟೆಯಲ್ಲಿ ತೊಡಗಿದ್ದ ಇಬ್ಬರು ಪಾರ್ಟಿ‌ ವಿಚಾರವಾಗಿ ಕಿರಿಕ್ ಉಂಟಾಗಿ ಕೆಲಹೊತ್ತು ಗಲಾಟೆ ನಡೆದಿತ್ತು ಎನ್ನಲಾಗಿದೆ.
ಈ ವೇಳೆ ವಿಶ್ವನಾಥ ಕಣ್ಣಿಗೆ ರಭಸವಾಗಿ ಹಣಮಂತಪ್ಪ ಬೆರಳು ತಾಗಿದೆ ಇದೇ ಸಿಟ್ಟು ಇಟ್ಟುಕೊಂಡು ಕಲ್ಲಿನಿಂದ ಹಣಮಂತ ತಲೆಗೆ ವಿಶ್ವನಾಥ ಹೊಡೆದಿದ್ದಾ‌ನೆ.ಕಲ್ಲಿನಿಂದ ಹೊಡೆದ ತೀವ್ರತೆಗೆ ಸ್ಥಳದಲ್ಲಿಯೇ ರಕ್ತಸ್ರಾವವಾದ ಕಾರಣಕ್ಕೆ ಕುಸಿದು ಬಿದ್ದು ಹಣಮಂತಪ್ಪ ಮೃತಪಟ್ಟಿದ್ದಾನೆ.ಹಣಮಂತ ‌ಕುಸಿದು ಬೀಳ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತು ವಿಶ್ವನಾಥ ‌ಪರಾರಿಯಾಗಿದ್ದು ಕೆಲವೇ ಗಂಟೆಗಳಲ್ಲಿ ಆರೋಪಿ ವಿಶ್ವನಾಥ ಬಂಧಿಸಿ ನೇಸರಗಿ ಠಾಣೆ ‌ಪೊಲೀಸರು ಜೈಲಿಗಟ್ಟಿದ್ದಾರೆ.

TV24 News Desk
the authorTV24 News Desk

Leave a Reply