ಬೆಳಗಾವಿ

ಡಾ.ಪ್ರಭಾಕರ ಕೋರೆಯವರ ಹಿರಿಯ ಸಹೋದರಿ ನಿಧನ

ಶ್ರೀಮತಿ ಶಾಂತಾದೇವಿ ಬಾಪುಸಾಹೇಬ ನೇರ್ಲಿ ನಿಧನ
ಬೆಳಗಾವಿ : ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ಹಿರಿಯ ಸಹೋದರಿ ಹಾಗೂ ನಗರದ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಯುರೊಲಾಜಿಸ್ಟ್ ಹಿರಿಯ ತಜ್ಞವೈದ್ಯರಾದ ಡಾ. ಆರ್ ಬಿ ನೇರ್ಲಿ ಅವರ ಮಾತೋಶ್ರೀ ಶ್ರೀಮತಿ ಶಾಂತಾದೇವಿ ಬಾಪುಸಾಹೇಬ ನೇರ್ಲಿ(86) ಅವರಿಂದಿಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾದರು. ಮೃತರು ಓರ್ವ ಪುತ್ರ, ಸೊಸೆ ನ್ಯಾಯವಾದಿಗಳಾದ ಸುಪ್ರಿಯಾ ನೇರ್ಲಿ, ಮೊಮ್ಮಗಳು ನಯನಾ ನೇರ್ಲಿ ಹಾಗೂ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ. 
ಈ ಕುರಿತು ಮಾತನಾಡಿದ ಡಾ.ಪ್ರಭಾಕರ ಕೋರೆಯವರು ಮಾತೃಹೃದಯದ ಸಹೋದರಿ ಶಾಂತಾದೇವಿಯವರು ಸರಳತೆ ಹಾಗೂ ಸೌಜನ್ಯತೆಯ ಆಗರವಾಗಿದ್ದರು. ಬಾಲ್ಯದಿಂದಲೂ ನಮಗೆಲ್ಲ ಪ್ರೇರೇಪಿಸಿ ಪ್ರೋತ್ಸಾಹಿಸಿ ಬೆಳೆಸಿದ್ದರು. ಅವರ ಮಾರ್ಗದರ್ಶನವು ನನ್ನ ಬೆಳವಣಗೆಯಲ್ಲಿ ಪ್ರಧಾನ ಪಾತ್ರವಹಿಸಿತ್ತು. ನನ್ನ ತಾಯಿ ಸ್ವರೂಪಳಾಗಿದ್ದ ಸಹೋದರಿಯನ್ನು ಕಳೆದುಕೊಂಡು ತೀವ್ರ ಆಘಾತವನ್ನುಂಟುಮಾಡಿದೆ. ಭಗವಂತನು ಅವರ ಪವಿತ್ರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ದುಃಖ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಗೆ ಕೋರೆ, ನೇರ್ಲಿ, ಖೋತ ಬಂಧು ಬಾಂಧವರು, ಅನೇಕ ಗಣ್ಯವ್ಯಕ್ತಿಗಳು ಶೋಕ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.
TV24 News Desk
the authorTV24 News Desk

Leave a Reply