


ಬೆಳಗಾವಿ:
ತಮ್ಮ ಅಳಿಯನ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ್ದಾರೆ.ರೂಟೀನ್ ನಲ್ಲಿ ದಾಳಿಯಾಗಿರಬಹುದು ಎಂದು ಮಾತು ಆರಂಭಿಸಿದ ಸಚಿವರು ದಾಳಿಯ ಕುರಿತು ನಮಗೂ ಮಾಹಿತಿ ಇಲ್ಲ. ಅದರ ಕುರಿತು ನಾವೇನು ಹೇಳಲು ಆಗುತ್ತೆ ಎಂದು ಮರು ಪ್ರಶ್ನೆ ಮಾಡಿದರು. ಯಾವುದಕ್ಕೆ ದಾಳಿ ಆಗಿದೆ ಎಂದು ತನಿಖೆ ಆಗಬೇಕು. ಮಾಹಿತಿ ಬರುವವರೆಗೆ ಇದೇ ಕಾರಣಕ್ಕೆ ದಾಳಿಯಾಗಿದೆ ಇದು ಹಿಂಗೆ ಎಂದು ಹೇಳಲು ಆಗೋದಿಲ್ಲ. ನಾಳೆಯವರೆಗೂ ವೇಟ್ ಮಾಡ್ತಿವಿ ಕಾರಣ ನಂತರ ಗೊತ್ತಾಗುತ್ತೆ ಎಂದಿದ್ದಾರೆ. ಮಂಜುನಾಥ ಅವರು ನಮ್ಮ ಭಾಮೈದ ಇರಬಹುದು ಆದರೆ ಯಾವ ಕಾರಣಕ್ಕೆ ದಾಳಿ ಆಗಿದೆ,ಅಧಿಕಾರಿಗಳು ಎನು ದಾಖಲೆ ಕೇಳಿದ್ದಾರೆ ಎಂದು ಗೊತ್ತಾಗಬೇಕು. ನಾಳೆ ಮಾಹಿತಿ ಪಡೆದು ಮಾತನಾಡುತ್ತೆನೆ ಎಂದಿದ್ದಾರೆ. ಇನ್ನು ದಾಳಿಯು ಏಳು ಕಡೆಗಳಲ್ಲಿ ಆಗಿದೆ ಎಂದು ಮಾಧ್ಯಮಗಳು ಮರುಪ್ರಶ್ನೆ ಮಾಡಿದಾಗ ಏಳು ಕಡೆ ಎಂಟು ಕಡೆ ಬಿಟ್ಟು ಹತ್ತು ಕಡೆ ದಾಳಿ ಆಗಿರಬಹುದು ಮಾಹಿತಿ ಇಲ್ಲದೆ ಮಾತನಾಡಲು ಆಗೋದಿಲ್ಲ ಎಂದಿದ್ದಾರೆ. ಇದರ ಹಿಂದೆ ರಾಜಕೀಯವಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಈಗ ಅದರ ಕುರಿತು ನಾನು ಮಾತನಾಡುವುದಿಕ್ಲ ಮಾಹಿತಿ ಪಡೆದು ರಾಜಕೀಯ ಇದೆಯೋ ಇಲ್ಲವೋ ಮಾತನಾಡುತ್ತೆನೆ ಎಂದು ಪ್ರತಿಕ್ರಿಯೇ ನೀಡಿದ್ದಾರೆ.









