Uncategorized

ಹಿರಿಯ ಚಿತ್ರನಟ ಶ್ರೀಧರ್‌ ಯಾರ ಕಾಲಿಗೆರಗಿದ್ದು ಗೊತ್ತಾ? ಇದು ಗುರುಶಿಷ್ಯರ ಸಮಾಗಮ ಸಂಗಮದ ಕ್ಷಣ!!

ಬಸವಾನಂದ ಗುರುಗಳ ಆಶೀರ್ವಾದ ಪಡೆದ ಚಿತ್ರನಟ ಶ್ರೀಧರ್ ಅವರು
ಬಸವಾನಂದ ದಂಪತಿಗಳಿಗೆ ಶಿಷ್ಯ ಬಳಗದಿಂದ ಗೌರವ ಸನ್ಮಾನ

ಗೋಕಾಕ: ಗುರುವಿನ ಗುಲಾಮನಾಗುವ ತನಕ‌ ಸಿಗದಣ್ಣ ಮುಕುತಿ ಎಂಬ ಮಾತಿದೆ. ಆ ಮಾತು ಮೊನ್ನೆ ಮೊನ್ನೆ ಗೋಕಾಕದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹಿಡಿದ ಕೈಗಣ್ಣಡಿಯಂತಿತ್ತು. ಅಲ್ಲಿ ನೆರೆದವರೆಲ್ಲರೂ ಓರ್ವ ಹಿರಿಗುರುವಿನ ಜನ್ಮದಿನದ ಸಂಭ್ರದಲ್ಲಿ ಪಾಲ್ಗೊಂಡಿದ್ದರು. ಗೋಕಾಕದ ಜ್ಞಾನ ಮಂದಿರದಲ್ಲಿ ನಡೆದ ಸರಳ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ತಕ್ಷಣವೇ ಸಾಕ್ಷಾತ್ಕಾರ ಎಂಬ ವಿಷಯದ ಮೇಲೆ ಸತ್ಸಂಗ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.ಅಂದಹಾಗೆ ಅದು ಗೋಕಾಕದ ಹಿರಿಯ ಆಧ್ಯಾತ್ಮಪ್ರವಚನಕಾರಾದ ಬಸವಾನಂದ ಗುರುಗಳ 75ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ. ಸಾಮಾನ್ಯವಾಗಿ ಇತ್ತೀಚಿನ ಬರ್ತಡೇ ಕಾರ್ಯಕ್ರಮಗಳು ಎಂದರೇ ಪಾಶ್ಚಾತ್ಯ ಸಂಸ್ಕೃತಿಗಳ ಹೂರಣವೇ ಆಗಿ ಬಿಟ್ಟಿವೆ. ಆದರೆ ಹುಟ್ಟು ಹಬ್ಬದಲ್ಲಿಯೇ ಸತ್ಸಂಗ ಮಾಡುವುದರ ಮೂಲಕ ಹೀಗೂ ಹುಟ್ಟು ಹಬ್ಬದ ಕಾರ್ಯಕ್ರಮ ಮಾಡಬಹುದು ಎನ್ನುವುದನ್ನು ಈ ಕಾರ್ಯಕ್ರಮ ನಿರೂಪಿಸಿತು.

ಗೋಕಾಕದ ಗಾನಕೋಗಿಲೆ ಎಂದೇ ಖ್ಯಾತಿಹೊಂದಿದ ಮಹಾನಂದಾ ಗೋಸಾವಿಯವರ ತಂದೆಯವರಾದ ಶ್ರೀಬಸವಾನಂದ ಗುರುಗಳ 75ನೇ ಹುಟ್ಟು ಹಬ್ಬದ ‌ಕಾರ್ಯಕ್ರಮಕ್ಕೆ ಅವರ ಶಿಷ್ಯಕೋಟಿ ಸಾಕ್ಷಿಯಾಯ್ತು. ಅದರಲ್ಲೂ ಕನ್ನಡ ಚಿತ್ರರಂಗದ ಹಿರಿಯ ನಟ ಭರತನಾಟ್ಯ ಪ್ರವೀಣ ಶ್ರೀಧರ್ ಅವರು ಈ ಕಾರ್ಯಕ್ರಮದಲ್ಲಿ ‌ಪಾಲ್ಗೊಂಡು ಬಸವಾನಂದ ಗುರುಗಳೊಂದಿಗೆ ತಮ್ಮ ಒಡನಾಟವನ್ನು‌ ನೆನೆದರು. ಶ್ರೀಧರ ಅವರ ಕುರಿತಾಗಿ ಕನ್ನಡ ನಾಡಿನ ಜನರಿಗೆ ‌ಹೇಳುವುದು ಎಂದರೇ ಅದು ಖಂಡಿತವಾಗಿಯೂ ಅತೀಷಯೋಕ್ತಿಯೇ ಸರಿ. ಅಂತಹ ಹಿರಿಯ ಕಲಾವಿದ ಗೋಕಾಕದಲ್ಲಿ ಹುಟ್ಟಿ ಬೆಳೆದ ಬಸವಾನಂದ ಶ್ರೀಗಳ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದು ಎಲ್ಲರೂ ಒಂದು ಕ್ಷಣ ಆಶ್ಚರ್ಯಗೊಳ್ಳುವಂತೆ ಮಾಡಿತು. ನಾಡಿನ ಆಧ್ಯಾತ್ಮ‌ದ ಆತ್ಮವೇ ಆಗಿರುವ ಸಂತ ಶಿಶುನಾಳ ಶರೀಫರ ಪಾತ್ರ ಮಾಡುವುದರ ಮೂಲಕ ಶಿಶುನಾಳಜ್ಜನವರು ಹೇಗಿದ್ದರು. ಅವರ ಬದುಕು ಹೇಗಿತ್ತು ಅವರ ಆಧ್ಯಾತ್ಮ‌ ಚಿಂತನೆ ಎಂಥದ್ದು ಎಂದು ತಮ್ಮ‌ ನಟನೆಯ ಮೂಲಕವೇ ಜಗತ್ತಿಗೆ ಪರಿಚಯವಾಗುವಂತೆ ಮಾಡಿದ್ದು ಇದೇ ಹಿರಿಯ ಕಲಾವಿದ ಶ್ರೀಧರ್ ಅವರು. 1990 ರಲ್ಲಿ ತೆರೆಕಂಡ ಟಿ ಎಸ್ ನಾಗಾ(ಆ)ಭರಣರ ನಿರ್ದೇಶನದಲ್ಲಿ‌ ಮೂಡಿ ಬಂದ ಆ ಚಿತ್ರ ಗುರುಶಿಷ್ಯರ ಬಾಂಧವ್ಯದ ಕೊಂಡಿಯಾಗಿ,‌ಹಾಗೂ ಲೌಕಿಕ ಆಧ್ಯಾತ್ಮ ಜೀವನದ ಸಂಕೇತವಾಗಿ, ಭವಬಂಧನಗಳ ರುಚಿಸಿ ಕಡೆಗೆ ಆತ್ಮಪರಮಾತ್ಮನತ್ಮ ಸಾಗುವ ಸುಂದರ ಪ್ರಯಾಣವಾಗಿಯೂ ಸಹ ಜನಮನದಲ್ಲಿ ಇಂದಿಗೂ ಚಿರಸ್ಥಾಯಿಯಾಗಿದೆ. ಅಂತಹ ಮೇರು ನಟ ಸಮಾನ್ಯರಲ್ಲಿ ಸಮಾನ್ಯನಾಗಿ ಬಂದು ತಮಗೆ ಆಧ್ಯಾತ್ಮ ದಾಸೋಹ ಹಾಗೂ ಜ್ಞಾನದಾಸೋಹ ಮಾಡಿದ ಗುರುವಿನ ಪಾದಕ್ಕೆ ಎರಗಿದ್ದು ಗುರುಶಿಷ್ಯ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಂತೆ ಭಾಸವಾಯ್ತು. ಕಾರ್ಯಕ್ರಮದಲ್ಲಿ ತಕ್ಷಣವೇ ಸಾಕ್ಷಾತ್ಕಾರ ವಿಷಯ ಕುರಿತು ಗುರುಗಳಾದ ಬಸವಾನಂದ ಶ್ರೀಗಳು ಮಾತನಾಡಿ ಆತ್ಮಜ್ಞಾನ ಹೊಂದುವುದೇ ಪರಮ ತಪಸ್ಸು ಮನಸ್ಸನ್ನು ಅರಿತು ಅದನ್ನು ನಿಯಂತ್ರಿಸಿ ಪರಮಾತ್ಮನಲ್ಲಿ ಅದನ್ನು ಲೀನಗೊಳಿಸಿ ಆತ್ಮಜ್ಞಾನ ಪಡೆಯುವುದೇ ನಿಜವಾದ ಸಾಕ್ಷಾತ್ಕಾರ ಎಂದರು. ಇನ್ನು ಕಾರ್ಯಕ್ರಮದ ಸಾನಿಧ್ಯವನ್ನು ಗೋಕಾಕದ ಶೂನ್ಯ ಸಂಪಾದನ ಮಠದ ಪೀಠಾಧಿಪತಿಗಳಾದ ಮುರುಘರಾಜೇಂದ್ರ ಶ್ರೀಗಳು ಹಾಗೂ ಸುವರ್ಣತಾಯಿ ಹೊಸಮಠ ಅವರು ವಹಿಸಿದ್ದರು.ಕಾರ್ಯಕ್ರಮದ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಪ್ರೋ, ಚಂದ್ರಶೇಖರ್ ಅಕ್ಕಿ,ಯುವ ಧುರೀಣ ಅರುಣ್ ಐಹೊಳೆ,ಕಸಾಪ ಅಧ್ಯಕ್ಷೆ ಸುಮಂಗಲಾ ಚಂದ್ರಕಾಂತ ಅಂಗಡಿ,ಎನ್ ವಿ ಶಿರಗಾಂವ್ಕರ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ್ ತಾಂವಶಿ,ಸಿರಿಗನ್ನಡ ಮಹಿಳಾ ವೇದಿಕೆಯ ಅಧ್ಯಕ್ಷೆ ರಜನಿ ಜೀರಗ್ಯಾಳ ಅವರು ಭಾಗಿಯಾಗಿದ್ದರು.ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ರವೀಂದ್ರ ಸೋರಗಾವಿ ಹಾಗೂ ಮಹಾನಂದಾ ಗೋಸಾವಿ ತಮ್ಮ ಸಂಗೀತದ ಮೂಲಕ ಜನಮನ‌ ರಂಜಿಸಿದರು. ಶಿಕ್ಷಕ ರಾಮಚಂದ್ರ ಕಾಕಡೆ ನಿರೂಪಿಸಿ ವಂದಿಸಿದರು.

TV24 News Desk
the authorTV24 News Desk

Leave a Reply