Uncategorized

ಸತೀಶ್ ಜಾರಕಿಹೊಳಿ ಅಳಿಯ ಮಂಜುನಾಥ್ ಮನೆಯ ಮೇಲೆ ಇಡಿ ಅಧಿಕಾರಿಗಳ ದಾಳಿ!

ಅಬಕಾರಿ ಹೆಚ್ಚುವರಿ ಆಯುಕ್ತ ವೈ ಮಂಜುನಾಥ್
ಅಧಿಕಾರಿಗಳ‌ ದಾಳಿ.

ಬೆಳಗಾವಿ:

ಬೆಳಗಾವಿಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ ಮಂಜುನಾಥ್ ಮನೆಯ ಮೇಲೆ ಬೆಳ್ಳಂ ಬೆಳಗ್ಗೆ ಈಡಿ ರೇಡ್ ಆಗಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ‌ ಅಳಿಯನೂ ಆಗಿರುವ ಮಂಜುನಾಥ್ ಗೆ ಇಡಿ ಶಾಕ್ ಎದುರಾಗಿದ್ದು ಮಂಜುನಾಥ್ ಗೆ ಸೇರಿದ ಆರು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಾ ಬೆಂಗಳೂರು ಮೂಲದ ಅಧಿಕಾರಿಗಳಿಂದ ದಾಳಿ ನಡೆದಿದ್ದು ಸತೀಶ್ ಜಾರಕಿಹೊಳಿ ಸಹೋದರಿಯ ಪತಿಯೂ ಆಗಿರುವ ಮಂಜುನಾಥಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. 10 ಕ್ಕೂ ಅರೆಸೇನಾ ಪಡೆ ಭದ್ರತೆಯೊಂದಿಗೆ ದಾಳಿ ನಡೆಸಿ ಅಧಿಕಾರಿಗಳು ಆಸ್ತಿ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರು,ಮೈಸೂರು,ಬೆಳಗಾವಿ, ಅರಸಿಕೆರೆ,ಸೇರಿ ಒಟ್ಟು ಆರು ಕಡೆ ದಾಳಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿರುವ ಮಂಜುನಾಥಗೆ ಸೇರಿದ ಅಪಾರ್ಟಮೇಂಟ್ ಮೇಲೂ ಸಹ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ಹಾಸನದಲ್ಲಿರುವ ಮಂಜುನಾಥ್ ಆಪ್ತನ ಮನೆಯ ಮೇಲೂ ಸಹ ದಾಳಿ ನಡೆದಿದ್ದು ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ಮಂಜುನಾಥ ಸ್ನೇಹಿತನ ಮನೆಯ ಮೇಲೂ ಸಹ ದಾಳಿಯಾಗಿದೆ ಎಂದು ತಿಳಿದು ಬಂದಿದೆ. ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ ಪುತ್ರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಭಾಮೈದನೂ ಆಗಿರುವ ಮಂಜುನಾಥ್ ಮೇಲೆ ಬೇನಾಮಿ ಹೆಸರಲ್ಲಿ ಜಮೀನು, ಬಾರ್, ರೆಸ್ಟೋರೆಂಟ್ ಸೇರಿ ಅಕ್ರಮ ಆಸ್ತಿ ಸಂಪಾದನೆಯ ಆರೋಪವಿದೆ. ಸದ್ಯ ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ವೈ ಮಂಜುನಾಥ್ ಇದ್ದಾರೆ ಎನ್ನಲಾಗಿದ್ದು ಅಪಾರ್ಟ್ಮೆಂಟ್ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಆಸ್ತಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!