Uncategorized

ಮುಸ್ಲಿಂ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ: ಸಚಿವ ಸತೀಶ್

ಬೆಳಗಾವಿ:

ರಾಜ್ಯ ಸಚಿವ ಸಂಪುಟ ವಚನ ವಿಸ್ತರಣೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆ ಉತ್ತರಿಸಿ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಸಚಿವ ಸಂಪುಟ ವಿಸ್ತರಣೆ ನಿರ್ಣಯ ಸಿಎಂ ಹಾಗೂ ಹೈಕಮಾಂಡ್ ಮಾಡುತ್ತಾರೆ ಎಂದಿದ್ದಾರೆ. ಸಚಿವ ಸಂಪುಟದ ಬಗ್ಗೆ ಇನ್ನೂ ದಿನಾಂಕ ನಿಗದಿ ಆಗಿಲ್ಲ.ಹೈಕಮಾಂಡ್ ನಿರ್ಧಾರ ಮಾಡಿತ್ತಾರೆ ಎಂದಿದ್ದಾರೆ.ಬೆಳಗಾವಿ ನಗರಕ್ಕೆ ಈವರಗೇ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಹಾಸನಕ್ಕೂ ಸಹ ಈವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ‌ ಎಂದು ಹೇಳಿದರು. ಸದ್ಯ ಜಿಲ್ಲೆಗೆ ಒಂದು ಸ್ಥಾನವನ್ನಾದರೂ ನೀಡಬೇಕು ಎಂದು ನಾವು ಹೈಕಮಾಂಡ್ ಬಳಿ ಕೇಳಿದ್ದೆವೆ. ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಆಗುವುದಿಲ್ಲ. 20ಮಂತ್ರಿ ಸ್ಥಾನಗಳು ಖಾಲಿ ಇದ್ದು ಸ್ಥಾನ ಕ ಕೇಳುವವರು 40ರಿಂದ 60ಜನ ಇದ್ದಾರೆ. ಯಾರಿಗೆ ಕೊಡಬೇಕು ಜಾತಿವಾರು, ಪ್ರಾತಂವಾರು ಕೊಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಇನ್ನೂ ಸ್ಥಾನ ಕೂಡಲೇ ಬೇಕು ಸಂದರ್ಭಕ್ಕೆ ಅನುಗುಣವಾಗಿ ಸಚುವ ಸ್ಥಾನಗಳನ್ನು ಕೊಡ್ತಾರೆ.
ಯಾರಿಗೆ ಕೊಡಬೇಕು ಅನ್ನೊದು ಹೈಕಮಾಂಡ ತೀರ್ಮಾನ ಮಾಡುತ್ತೆ ಎಂದರು. ಇನ್ನು ‌ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು ಮುಸ್ಲಿಂ ಸಮದಾಯಕ್ಕೆ ಕನಿಷ್ಠ ಎರಡು ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡಿದ್ದೆವೆ ಎಂದರು.ಈ ವೇಳೆ ಅವರ ಪಕ್ಕದಲ್ಲಿಯೇ ಕುಳಿತಿದ್ದ ಶಾಸಕ ಅಸೀಪ್ ಸೇಠ್ ಮುಖದಲ್ಲಿ ಮಂದಹಾಸ ಮೂಡಿತು.ಮಾತು ಮುಂದುವರೆಸಿದ ಸಚಿವರು ಸಚಿವ ಸ್ಥಾನ ನೀಡುವ ನಿರ್ಧಾರ ಹೈಕಮಾಂಡ್ ತಡಗೆದುಕೊಳ್ಳುತ್ತೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

TV24 News Desk
the authorTV24 News Desk

Leave a Reply