ಬೆಳಗಾವಿ;
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಸೋಮವಾರ ಪೇಟೆಯಲ್ಲಿ ಭಾರಿ ಅನಾಹುತ ಒಂದು ಅದೃಷ್ಟವಶಾತ್ ತಪ್ಪಿದೆ. ಚಲಿಸುತ್ತಿದ್ದ ಕಾರಿನ ಮೇಲೆಯೇ ನೋಡ ನೋಡ್ತಿದ್ದಂತೆ ಬೃಹತ್ ಗೊಡೆಯೊಂದು ಬಿದ್ದಿದೆ. ನಗರದ ಸೋಮವಾರ ಪೇಟಯಲ್ಲಿ ಕಾರು ಚಲಿಸುತ್ತಿದ್ದಾಗಲೇ ಹಳೆಯ ಕಟ್ಟಡದ ಗೋಡೆಯೊಂದು ಕುಸಿದಿದೆ. ಕೆಎ03ಎಹೆಚ್ 7557 ನಂಬರಿನ ಕಾರಿನ ಮೇಲೆ ಗೋಡೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಸಣ್ಣ ಪುಟ್ಟಗಾಯಗಳೊಂದಿಗೆ ಕಾರು ಚಾಲಕ ಪಾರಾಗಿದ್ದಾನೆ. ಪ್ರವೀಣ್ ಜಮಖಂಡಿ ಎಂಬುವವರಿಗೆ ಸೇರಿದ ಕಾರು ಎನ್ನಲಾಗಿದ್ದು ಘಟನೆಯಿಂದ ಗೋಕಾಕ ನಗರದ ಜನ ಆತಂಕಗೊಂಡಿದ್ದು ಮಳೆಯ ಅವಾಂತರಗಳಿಂದ ಜನ ತತ್ತಿರಿಸಿ ಹೋಗಿದ್ದಾರೆ.ಇನ್ನು ಘಟನಾ ಸ್ಥಳಕ್ಕೆ ಗೋಕಾಕ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗೋಕಾಕ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.















