Uncategorized

ಬೆಳಗಾವಿಯ ಹೆಸ್ಕಾಂ ಕಚೇರಿಗೆ ಜಲದಿಗ್ಬಂಧನ!ಕಚೇರಿ ಸಿಬ್ಬಂಧಿ ಪರದಾಟ!

ಬೆಳಗಾವಿ:

ಬೆಳಗಾವಿಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆ ಹಿನ್ನೆಲೆಯಲ್ಲಿ
ಬೆಳಗಾವಿ ಗ್ರಾಮೀಣ ವಿಭಾಗದ ಹೆಸ್ಕಾಂ ಕಚೇರಿಗೆ ಜಲ ದಿಗ್ಬಂಧನವಾಗಿದೆ‌.ಬೆಳಗಾವಿ ನಗರದ ಗಾಂಧಿ ನಗರದಲ್ಲಿರುವ ಹೆಸ್ಕಾಂ ಗ್ರಾಮೀಣ ಉಪವಿಭಾಗ ‌ಕಚೇರಿಯ ಆವರಣದ ತುಂಬ ನೀರು ತುಂಬಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಹಿನ್ನೆಲೆಯಲ್ಲಿ ಹೆಸ್ಕಾಂ ಕಚೇರಿಯ ಆವರಣದಲ್ಲಿ ಮಳೆಯ ನೀರು ತುಂಬಿಕೊಂಡಿದೆ.ನೀರು ತೆಗೆಯಲು ಹೆಸ್ಕಾಂ ಕಚೇರಿ ಸಿಬ್ಬಂಧಿ ಪರದಾಟ ನಡೆಸಿದ್ದು
ಪಂಪಸೆಟ್ ಅಳವಡಿಸಿ ನೀರನ್ನು ಸಿಬ್ಬಂಧಿಗಳು ಹೊರ ಹಾಕುತ್ತಿದ್ದಾರೆ.ಕಚೇರಿಗೆ ಹೋಗಲು ಸಿಬ್ಬಂದಿ ಹಾಗೂ ಜನರು ಪರದಾಟ ನಡೆಸಿದ್ದು ಹೆಸ್ಕಾಂನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಲವು ಸಲ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಎನ್ ಎಚ್ ಸರ್ವೀಸ ರಸ್ತೆಯ ಚರಂಡಿ ದುರಸ್ತಿ ಮಾಡದ ಕಾರಣ ಮಳೆಯ ನೀರು ಹೆಸ್ಕಾಂ ಕಚೇರಿಯ ಮುಂದೆ ನಿಂತು ಅಧಿಕಾರಿಗಳು ಹಾಗೂ ಕಚೇರಿಗೆ ಬರುವ ಜನರೂ ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

TV24 News Desk
the authorTV24 News Desk

Leave a Reply