Uncategorized

ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ ಸಂಕೇಶ್ವರದಲ್ಲಿ ಭೀಕರ ಕೊಲೆ!!

ಕೊಲೆಯಾದ ಬಾಬು ಭೂಸಗೋಳ್

ಬೆಳಗಾವಿ:

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಾಬು ಶಂಕರ್ ಭೂಸಗೋಳ(35) ಎಂದು ಗುರುತಿಸಲಾಗಿದ್ದು ತಲೆಗೆ ಕಲ್ಲಿನಿಂದ ಹೊಡೆದು ಬಳಿಕ ಚಾಕು ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.ಬಾಬು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಹಾಗೂ ಆತನ ಸ್ನೇಹಿತ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ ಎಂಬ ಗುಮಾಣಿ ಇದ್ದು ನಿಜವಾದ ಕೊಲೆಗಾರರು ಯಾರು ಕೊಲೆ ನಡೆದಿರೋದು ನಿಜಕ್ಕೂ ಅನೈತಿಕ ಸಂಬಂಧ ಹಿನ್ನೆಲೆಯಲ್ಲೋ ಅಥವಾ ಇನ್ಯಾವ ಕಾರಣಕ್ಕೋ ಎನ್ನುವುದನ್ನು ಪೊಲೀಸರ ತ‌ನಿಖೆಯ ನಂತರವೇ ತಿಳದು ಬರಬೇಕಿದೆ. ಕೊಲೆಯಾದ ಬಾಬು ಅನೈತಿಕ ಸಂಬಂಧ ಹೊಂದುವುದರ ಜೊತೆಗೆ ರಸ್ತೆ ವಿಚಾರಕ್ಕೂ ಸಹ ಕಿರಿಕ್ ಮಾಡಿಕೊಂಡಿದ್ದ ಎನ್ನಲಾಗಿದೆ. ಸಧ್ಯ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು ವಿಚಾರಣೆಯ ಬಳಿಕವೇ ಕೊಲೆಗೆ ಸ್ಪಷ್ಟ ಕಾರಣ ಗೊತ್ತಾಗಲಿದೆ. ಸ್ಥಳಕ್ಕೆ ಸಂಕೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply