ಬೆಳಗಾವಿ:
ಎರಡು ವಾಹನಗಳ ಮಧ್ಯೆ ಭೀರಕ ರಸ್ತೆ ಅಪಘಾತ ಸಂಭವಿಸಿ ಅಪಘಾತದ ರಭಸಕ್ಕೆ ರಸ್ತೆ ಪಕ್ಕವೇ ಎರಡೂ ವಾಹನಗಳು ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿಯಲ್ಲಿ ನಡೆದಿದೆ. ಎಂ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಧಾರುಣ ಘಟನೆ ನಡೆದಿದ್ದು ಅದೃಷ್ಟವಷಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು ಹಾಲಿನ ಟ್ಯಾಂಕರ್ ಮತ್ತು ಗೋವಿನಜೋಳ ಹೊತ್ತು ಸಾಗುತ್ತಿದ್ದ ವಾಹನಗಳ ಮದ್ಯೆ ಅಪಘಾತ ಸಂಭವಿಸಿದೆ. ಕಿತ್ತೂರು ಮಾರ್ಗವಾಗಿ ಬೆಳಗಾವಿ ಕಡೆಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಹಾಲಿನ ವಾಹನ ಗೋವಿನ ಜೋಳ ತುಂಬಿಕೊಂಡು ಸಾಗುತ್ತಿದ್ದ ಲಾರಿ ಬಲ ಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಎರಡೂ ವಾಹನಗಳು ಹೊತ್ತಿ ಉರಿದಿವೆ..ಬೆಂಕಿಯ ಕೆನ್ನಾಲಗೆಗೆ ಲಾರಿಯಲ್ಲಿದ್ದ ಐನೂರಕ್ಕೂ ಹೆಚ್ಚು ಚೀಲ ಗೋವಿನ ಜೋಳ ಸುಟ್ಟು ಕರಕಲಾಗಿದೆ.ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂಧಿ ಬೆಂಕಿ ನಂದಿಸುವುದಕ್ಕಾಗಿ ಹರಸಾಹಸವನ್ನೆ ಪಡೆಬೇಕಾಯ್ತು. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










