Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ

ಬೆಳಗಾವಿ: ಟಿಕೆಟ್ ಘೋಷಣೆ ಆಗುತ್ತಿದಂತೆ ಬೆಳಗಾವಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ ಆಗಿದ್ದು, ರಾಮದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅರ್ಜುನ ಗುಡ್ಡದ ಬಂಡಾಯ ಏಳುವದಾಗಿ ಎಚ್ಚರಿಕೆ ನೀಡಿದ್ದಾರೆ
ಟಿಕೆಟ್ ಸಿಗದ ಹಿನ್ನೆಲೆ ಮಾದ್ಯಮಗೋಷ್ಠಿ ನಡೆಸಿ ಅಸಮಾಧಾನ  ಹೊರ ಹಾಕಿದ ಗುಡ್ಡದ ಅವರು, ಅಶೋಕ ಪಟ್ಟಣ ಅವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ವ್ಯಕ್ತಿಕ ತೇಜೊವಧೆ ಮಾಡುತ್ತಿದ್ದಾರೆ. ನಾವು ಟಿಕೆಟ್ ಕೇಳಿದ ಹಿನ್ನೆಲೆ ಅವರು ನಮ್ಮ ಮೇಲೆ ತೇಜೋವಧೆ ಮಾಡುತ್ತಿದ್ದಾರೆ. ಅಶೋಕ ಪಟ್ಟಣ ಈ ಕೂಡಲೆ ನಮಗೆ ಕ್ಷಮೆ ಕೇಳಬೇಕು. ಅಶೋಕ ಪಟ್ಟಣಗೆ ಯಾವ ಆಧಾರದ ಮೇಲೆ ಟಿಕೆಟ್ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ‌
ಅವರು ಕಾಂಗ್ರೆಸ್ ಆಭ್ಯರ್ಥಿ ಆದರೆ ನಾನು ಬಂಡಾಯ ಅಭ್ಯರ್ಥಿ ಆಗ್ತೇನೆ, ಗೆಲ್ಲುವ ಮೂಲಕ ಅಶೋಕ ಪಟ್ಟಣಗೆ ತಕ್ಕ ಪಾಠ ಕಲಿಸುತ್ತೇವೆ. ರಾಮದುರ್ಗನಿಂದ ಐದು ಜನ ಟಿಕೆಟ್ ಕೇಳಿದ್ದೇವು, ಆದರೆ ಅವರು ನನಗೆ ಬೆಂಬಲ ನೀಡುವ ಭರವಸೆ ಇದೆ, ಬಹಿರಂಗವಾಗಿ ಇಲ್ಲ ಆದರೂ ಬೆಂಬಲ ನೀಡುತ್ತಾರೆ. 2018 ರ ಚುನಾವಣೆಯಲ್ಲಿ ಅಶೋಕ ಪಟ್ಟಣ ಸೊಲಿಗೆ ಕಾರಣ ನಮ್ಮನ್ನು ಕಡೆಗಣಿಸಿದ್ದು,ಅಶೋಕ ಪಟ್ಟಣ ಸಿದ್ದರಾಮಯ್ಯ ಅವರನ್ನು ಬ್ಲಾಕ್ ಮೇಲೆ ಮಾಡಿ ಟಿಕೇಟ್ ಪಡೆದುಕೊಳ್ಳುತ್ತಾರೆ ಎಂದು ಅರ್ಜುನ ಗುಡ್ಡದ ಆರೋಪ ಮಾಡಿದ್ದಾರೆ. ‌
TV24 News Desk
the authorTV24 News Desk

Leave a Reply

error: Content is protected !!