Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಕರ್ನಾಟಕ – ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಹೈ ಅಲರ್ಟ್ …. !

 ಚಿಕ್ಕೋಡಿ: ನಿನ್ನೆ ಬೆಳಗಾವಿ ಜಿಲ್ಲೆಯ  ಗಡಿಭಾಗದ ನಿಪ್ಪಾಣಿಯ ಪ್ರವಾಸಿ ಮಂದಿರದಲ್ಲಿ  ADGP ಅಲೋಕ್ ಕುಮಾರ ನೇತೃತ್ವದಲ್ಲಿಸಭೆ ನಡೆದಿತ್ತು.  ಸಭೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಉನ್ನತ ಪೋಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು . ಆನ್ಲೈನ್ ಮೂಲಕ ಭಾಗಿಯಾದ ಮಹಾರಾಷ್ಟ್ರದ ಉನ್ನತ ಪೋಲೀಸ್ ಅಧಿಕಾರಿಗಳು  ಸಭೆಯಲ್ಲಿ ಭಾಗಿಯಾಗಿ  ಗಡಿ ವಿವಾದ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶಾಂತಿ ಸಭೆ ನಡೆಸಿದ್ದರು. ಪೊಲೀಸ ಅಧಿಕಾರಿಗಳ ಸಭೆಯ ನಂತರ ರಾಜ್ಯದ ಗಡಿ  ಭಾಗದಲ್ಲಿ  ಎಡಿಜಿಪಿ ಅಲೋಕ್‍ಕುಮಾರ ಪರಿಸ್ಥಿತಿ ಅವಲೋಕಿಸಿದ್ದರು.
 ಇಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ವಿವಾದಗಳ ಹಿನ್ನಲೆಯಲ್ಲಿ  ಕಾಗವಾಡ ನಲ್ಲಿ ಹೈ ಅಲರ್ಟ್  ಪೊಲೀಸ ಬಂದೋಬಸ್ತ ಮಾಡಲಾಗಿತ್ತು,  ಸುಪ್ರೀಂ ಕೋರ್ಟದಲ್ಲಿ ನಡೆಯುತ್ತಿರುವ ವಾದ ವಿವಾದ ಹಿನ್ನೆಲೆಯಲ್ಲಿ  ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಕಾಗವಾಡದ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಿದ್ದಾರೆ. ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐ ಹನುಮಂತ ನರಳೆ ಇವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ ಒದಗಿಸಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!